
ಸಕಲೇಶಪುರ.ತಾಲ್ಲೂಕಿನ ಕಿರೇಹಳ್ಳಿ ಗ್ರಾಮದ ಶ್ರೀನಿವಾಸ ಎಸ್ಟೇಟ್ ಸಮೀಪ ಭಾನುವಾರ ರಾತ್ರಿ ಕಾಟಳ್ಳಿ ಗ್ರಾಮದ ಚೇತನ್ ಅವರು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಸಿದ ತಕ್ಷಣ ಚೇತನ್ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾರೆ.
ಕೋಪಗೊಂಡ ಕಾಡಾನೆ ಬೈಕನ್ನು ತುಳಿದು ಹಾನಿ ಮಾಡಿದೆ.ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ,ಸಾರ್ವಜನಿಕರು ಹಾಗು ವಾಹನ ಸವಾರರು ಕಾಟಳ್ಳಿ, ಕಿರೇಹಳ್ಳಿ, ಮಾಸವಳ್ಳಿ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕು ಮತ್ತು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿಕೊಂಡು ಹೋಗಬೇಕು ಎಂದು ವಾಹನ ಸವಾರರಿಗೆ ತಿಳಿಸಿದ್ದಾರೆ.


