
ಸಕಲೇಶಪುರ : ಕನ್ನಡ ಸಾಹಿತ್ಯ ಪರಿಷತ್ತು ಹಾನುಬಾಳು ಹೋಬಳಿ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ನೋಟ್ ಬುಕ್ ಮತ್ತು ಸ್ಕೆಚ್ ಪೆನ್ ವಿತರಣೆ ಮಾಡಲಾಯಿತು.
ಹಾಗೆಯೇ ಮಕ್ಕಳಿಗೆ ಸ್ವತಂತ್ರ ದಿನ ಆಚರಿಸಲು ಧ್ವಜ ಮತ್ತು ಬ್ಯಾಂಡ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಮಕ್ಕಳು ಮತ್ತು ಶಿಕ್ಷಕಿಯರು ಭಾಗಿಯಾಗಿದ್ದರು….
ಮಕ್ಕಳು ನನ್ನ ದೇಶ ನನ್ನ ಜನ ಎಂಬ ಹಾಡನ್ನು ಹಾಡಿ ದೇಶಾಭಿಮಾನ ವನ್ನು ಮೆರೆದರು. ಕಸಾಪ ಅಧ್ಯಕ್ಷರಾದ ಡಿ. ಎಸ್ ಲೋಕೇಶ್ ರವರು ಮಕ್ಕಳು ಮುಂದೆ ಒಳ್ಳೆಯ ಪ್ರಜೆಗಲಾಗ ಬೇಕು, ಉನ್ನತ ಸಾಧನೆ ಮಾಡಬೇಕು ಅದಕ್ಕೆ ತಕ್ಕ ಪರಿಶ್ರಮ ಬೇಕು ಎಂದು ಮಕ್ಕಳಿಗೆ ಪ್ರೋತ್ಸಾಹದ ನುಡಿ ಗಳನ್ನಾಡಿದರು.
ಹಾಗೆಯೇ ಕಾರ್ಯದರ್ಶಿಗಳಾದ ಸಾಹಿತಿ ಕೀರ್ತಿ ಕಿರಣ್ ರವರು ಮಾತನಾಡಿ ಕನ್ನಡ ಶಾಲೆಗಳ ಉಳಿವಿಗಾಗಿ ನಾವೆಲ್ಲರೂ ಒಂದಾಗಿ ಹೋರಾಡಬೇಕು ಮಕ್ಕಳಿಗೆ ಪಠ್ಯದ ಜೊತೆಗೆ ಸಂಗೀತ ಸಾಹಿತ್ಯ, ಕಲೆ, ನೃತ್ಯ, ಎಲ್ಲಾದರಲ್ಲಿಯೂ ತಮ್ಮ ಪ್ರತಿಭೆಯನ್ನು ಬೆಳಗಬೇಕು ಮುಂದೆ ಈ ಶಾಲೆಯಲ್ಲಿ ಓದಿದ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಆಶಯ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕನ್ನಡ ನಾಡು, ನುಡಿಗಾಗಿ ನೆಡೆಯುವ ಕಾರ್ಯಕ್ರಮಗಳಿಗೆ ಕಸಾಪದ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು. ಶಾಲೆ ಮಕ್ಕಳ ಭಾಗವಹಿಸುವಿಕೆ ಕಾರ್ಯಕ್ರಮ ಕ್ಕೆ ಮೆರುಗು ನೀಡಿತು. ಕಾರ್ಯಕ್ರಮ ದಲ್ಲಿ ಕಸಾಪ ಸದಸ್ಯ ರಾದ ಅಬ್ದುಲ್ ಲತೀಫ್ರವರು, ಹಾಗೆ ಮೋಹನ್ಅಚ್ಚರಡಿ ಹಾಜರಿದ್ದು ಮಕ್ಕಳಿಗೆ ಸಿಹಿ ಹಂಚಿ, ಪುಸ್ತಕ ಮತ್ತು ಸ್ಕೆಚ್ ಪೆನ್ ವಿತರಿಸಿದರು.
