
ಸಕಲೇಶಪುರ.ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಕಳಪೆ ಕಾಮಗಾರಿ ಎಂದು ಕಳೆದ ಕೆಲವು ದಿನಗಳ ಹಿಂದೆ ಹೋರಾಟ ಮಾಡಿ ಜಿಲ್ಲೆ ಮತ್ತು ರಾಜ್ಯದ ಗಮನ ಸೆಳೆಯಲಾಗಿತ್ತು.
ಇಂದು ಕಂಡು ಬಂದ ದೃಷ್ಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ನಿರ್ಮಿಸಿದ ರಸ್ಥೆ ಯನ್ನು ಯಂತ್ರೋಪಕರಣಗಳ ಸಹಾಯದಿಂದ ಕೀಳುತ್ತಿದ್ದಾರೆ.
ರಸ್ತೆ ಕಾಮಗಾರಿ ಪೂರ್ಣ ಗೊಳ್ಳುವ ಮುನ್ನವೇ ರಸ್ತೆಯನ್ನು ಕೀಳುತ್ತಿರುವುದು ಹೇಗಿದೆ ಎಂದರೆ ಗೃಹಪ್ರವೇಶಕ್ಕೆ ತಯಾರಾಗಿರುವ ಮನೆಯನ್ನು ಹಿಂದಿನ ದಿನ ನೆಲಸಮ ಮಾಡಿದಂತಿದೆ.
ಆದುದರಿಂದ ಈ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಮತ್ತು ಕಾಮಗಾರಿಯ ಯವುದೇ ಬಿಲ್ಲನ್ನು ಇವರಿಗೆ ಮಾಜರು ಮಾಡಬಾರದೆಂದು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಸಾಗರ್ ಜಾನೇಕೆರೆ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ ತಿಳಿಸಿದ್ದಾರೆ.


