ಸಕಲೇಶಪುರ – ಶುಕ್ರವಾರ ದಿನ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕುಶಾಲನಗರ ಬಡಾವಣೆಯಿಂದ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ದನದ ಮಾಂಸದ ಪ್ಯಾಕೆಟ್ ಅನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ನೀಡಿದ್ದು ಮಾಹಿತಿ ಪಡೆದ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಮೋದ್ ನೇತೃತ್ವದ ತಂಡ ಠಾಣೆ ಹಿಂಭಾಗ ರಸ್ತೆ ಆಶೋಕ ರಸ್ತೆಯಲ್ಲಿ ಬಳಿ ಬಣ್ಣದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಸ್ಕೂಟರ್’ನಲ್ಲಿ ದನದ ಮಾಂಸ ಪ್ಯಾಕೆಟ್ ಪತ್ತೆಯಾಗಿದ್ದು ನಗರ ಠಾಣೆಗೆ ಕರೆತಂದು ವಿಚಾರಿಸಲಾಗಿ ಆಜಾದ್ ರಸ್ತೆಯ ಹಮೀದ್ ಎಂಬುವವನು ಮನೆ ಮನೆಯಿಂದ ಆರ್ಡರ್ ಪಡೆದು ಹೋಂ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ.

ಕುಶಾಲನಗರ ಬಡಾವಣೆಯಿಂದ ತಂದಿರುವ ಮಾಹಿತಿ ಆಧರಿಸಿ ಪೋಲಿಸರು ಕುಶಾಲನಗರ ನಿವಾಸಿ ಜಬಿವುಲ್ಲಾ ಎಂಬುವವನ ಮನೆ ಮೇಲೆ ಧಾಳಿ ನಡೆಸಿದ್ದಾಗ ಸಂಪೂರ್ಣ ಖಾಲಿ ಆಗಿತ್ತು. ಸ್ಕೂಟರ್’ನಲ್ಲಿ ಇದ್ದ ದನದ ಮಾಂಸ ಪ್ಯಾಕೆಟ್’ಗಳ ಆಧಾರದ ಮೇಲೆ ನಗರ ಠಾಣೆಯಲ್ಲಿ ಆರೋಪಿಗಳಾದ ಹಮೀದ್ ಜಬಿವುಲ್ಲಾ ಎಂಬುವವರ ಮೇಲೆ ಗೋಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *