ಕಾಡಾನೆ ಮಾನವ ಸಂಘರ್ಷದಿಂದ 79 ಜನ ಸಾವಿಗೀಡಾಗಿದ್ದು ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಕಾಡಾನೆಗಳ ಹಾವಳಿಯಿಂದ ಈ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರ ಸ್ಥಿತಿ ಚಿಂತಾಜಾನಕವಾಗಿದೆ, ಹೀಗಿರುವಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯ ಗಂಭೀರತೆಯನ್ನು ಸರ್ಕಾರದ ಗಮನ ಸೆಳೆದು ಪರಿಹರಿಸುವ ಪ್ರಯತ್ನ ಮಾಡದಿರುವುದು ವಿಪರ್ಯಾಸ.

79 ಜನರು ಪ್ರಾಣ ಕಳಕೊಂಡರು ಸರಿಯಾದ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಪ್ರಶ್ನಿಸಿದಕ್ಕೆ ಎಡೆಹಳ್ಳಿ ಮಂಜುನಾಥ್ ಸೇರಿದಂತೆ ಹೋರಾಟಗಾರನ್ನು ಬಂಧಿಸಿ ಜನಸಾಮಾನ್ಯರ ಧ್ವನಿ ಹತ್ತಿಕ್ಕಲು ಹೊರಟಿರುವ ಆಡಳಿತ ವರ್ಗದ ನಡೆ ಅಚ್ಚರಿ ಮೂಡಿಸಿದೆ, ಇದರ ಪರಿಣಾಮ ಹೋರಾಟಗಾರರ ಬಂಧನ ಖಂಡಿಸಿ ಅಧಿಕಾರಿಗಳ ವಿರುದ್ದ ಉಗ್ರವಾದ ಹೋರಾಟ ನಡೆಸಲಾಗುವುದು. ಯಶ್ವಂತ್ ಬಾಳ್ಳುಪೇಟೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *