ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಮಹಿಳೆಯರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದಲ್ಲಿ 11 ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಇದರ ಬಗ್ಗೆ ಕರ್ನಾಟಕ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎ. ಜಗನ್ನಾಥ್ ರವರು ಮಾತನಾಡಿ ಸರಿಯಾದ ಕ್ರಮದಲ್ಲಿ ನೊಂದ ಜನರು ಹೋರಾಟ ನಡೆಸಬೇಕು ಹಾಗೂ ಹೋರಾಟ ಮಾಡುವ ವಿಧಾನಗಳು ಸಹ ಸರಿಯಾದ ರೀತಿಯಲ್ಲಿರಬೇಕು. ಜಾಥಾ, ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡುವುದರಿಂದ ಸಮುದಾಯವನ್ನು ಕೂಡ ಬಳಸಿಕೊಳ್ಳಬಹುದು.ನಮ್ಮ ಕೈಯಾರೆ ನಾವೇ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೇವೆ ಹಾಗಾಗಿ ಸಂಘಟನಾತ್ಮಕವಾಗಿ ಮಾಡಬೇಕು.

ಆನೆ ಹಾವಳಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಇದಕ್ಕೆ ಯಾವುದೇ ಕಾರಣಕ್ಕೂ ತುರ್ತು ಪರಿಹಾರ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾಡಬಾರದು ಬದಲಿಗೆ ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು. ಈ ಬಗ್ಗೆ ಚರ್ಚಿಸಿ ಇದಕ್ಕೆ ಯಾವುದೇ ರೀತಿಯ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಬಾರದು, ಪಕ್ಷಾತೀತವಾಗಿ ಸಮಸ್ಯೆಗಳನ್ನು ಕುರಿತು ಚರ್ಚಿಸಬೇಕು.

ಡಿಸಿಎಫ್ ಮತ್ತು ಅರಣ್ಯ ಕಾರ್ಯದರ್ಶಿಗಳು ಸಹ ಹಾಜರಿರಬೇಕು ಅವರ ಮುಂದೆಯೇ ಎಲ್ಲಾ ಬಗೆಯ ಸಮಸ್ಯೆ ಬಗೆ ಹರಿಯಬೇಕು ಹೋರಾಟಗಾರನ್ನು ಬಂಧಿಸಿರುವುದು ಬಹು ದೊಡ್ಡ ಅನ್ಯಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *