ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಮಹಿಳೆಯರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದಲ್ಲಿ 11 ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಎಸ್ಪಿ ರವರು ಉದ್ದೇಶ ಪೂರಕವಾಗಿ ನಿರ್ಧಾರ ತೆಗೆದುಕೊಂಡು ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಅಲ್ಲದೆ ಇದೇ ರೀತಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆನೆ ಹತ್ಯೆಯಿಂದ ಸಾವನ್ನಪ್ಪಿರುವುದು ಹೆಬ್ಬನಹಳ್ಳಿಯಲ್ಲಿ ನಡೆದಿತ್ತು ಆನೆ ಹಾವಳಿ ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಅಲ್ಲದೆ ಜನರು ಸಹ ಮೌನದಿಂದ ಇರಬೇಕು. ಮಲೆನಾಡು ಭಾಗದ ಜನಕ್ಕೆ ಇದೊಂದು ದೊಡ್ಡ ಸವಾಲಾಗಿದೆ.

ಹೋರಾಟಗಾರರಾದ ಯಡೇಹಳ್ಳಿ ಮಂಜುನಾಥ, ಜಾನೇಕೆರೆ ಸಾಗರ್ ಸೇರಿ 11 ಜನರನ್ನು ಬಂದಿಸಿದ್ದ ಪೊಲೀಸರು ಅವರ ವಿರುದ್ಧ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಆರೋಪ ಹೊರಿಸಿದ್ದಾರೆ.

ಈ ಕೂಡಲೇ ಎಸ್ಪಿ ಹಾಗೂ ಡಿಸಿ ಅವರ ಮುಖಾಂತರ ತಾಲೂಕಿನ ಎಲ್ಲಾ ಜನಪರ ಸಂಘಟನೆ ಮುಖಂಡರನ್ನು ಕರೆದು ಸಭೆಯಲ್ಲಿ ಆನೆ ಹಾವಳಿ ತಡೆಗಟ್ಟುವಿಕೆ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಮಾಜಿ ಶಾಸಕರಾದ ಎಚ್ ಎಂ ವಿಶ್ವನಾಥ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *