ಹಾಸನಾಂಬಾ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಸ್ಥಾನ ಹಲವು ಶತಮಾನಗಳ ಇತಿಹಾಸ ಹೊಂದಿರುವ ಪ್ರಾಚೀನ ಶಕ್ತಿ ಪೀಠವಾಗಿದೆ.ಈ ಪವಿತ್ರ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾದಿಗಳು ಇದ್ದಾರೆ. ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸುವುದು ಸೂಕ್ತ ಎಂದರು.

ದೀಪಾವಳಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಿಯರ ದರ್ಶನ ಪಡೆಯುತ್ತಾರೆ. ಆದರೆ ಜನರು ಆಧುನಿಕ ವ್ಯವಸ್ಥೆಗೆ ಮಾರು ಹೋಗಿದ್ದು, ದೇವರ ದರ್ಶನ ಪಡೆಯುವಾಗ ಪಾಶ್ಚಾತ್ಯ ಅಸಾತ್ವಿಕ ಉಡುಪುಗಳನ್ನು ಧರಿಸುತ್ತಿದ್ದಾರೆ. ವಿದೇಶಿಗರ ರೀತಿಯಲ್ಲಿ ಉಡುಪುಗಳಲ್ಲಿ ಧರಿಸಿ, ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ ಎಂದರು.

ದೇವಸ್ಥಾನಗಳ ಒಳಗೆ ಮೊಬೈಲ್‍ಗಳ ಬಳಕೆ ಮುಂತಾದ ಧರ್ಮಕ್ಕೆ ವಿರುದ್ಧವಾಗಿ ದೇವಸ್ಥಾನದ ಸಾತ್ವಿಕತೆ, ಪಾವಿತ್ರತೆಗೆ ಭಂಗ ಉಂಟಾಗುತ್ತದೆ. ಇದರಿಂದ ನೈಜ ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತಿದೆ. ಹಾಸನಾಂಬ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಅಳವಡಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಮಿಥುನ್ ಜೈನ್, ಸುರೇಶ್ ಗೌಡ, ಸುಜಾತಾ ನವೀನ್, ರಾಜು, ಕಲಾವತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *