
ಅರೇಹಳ್ಳಿ : ಕಳೆದ ರಾತ್ರಿ ಸುಮಾರು 20 ಕಾಡನೆಗಳ ದಾಳಿಗೆ ಲಿಂಗಾಪುರ ಎಸ್ಟೇಟ್ ನಲ್ಲಿ ಸುಮಾರು 4000 (ನಾಲ್ಕು ಸಾವಿರ ) ಕಾಫಿ ಗಿಡಗಳು), ಮತ್ತು 1000 (ಒಂದು ಸಾವಿರ ) ಅಡಿಕೆ ಮರಗಳು, 500 (ಐದುನೂರು ) ಮೆಣಸಿನ ಬಳ್ಳಿ ಫಸಲಿಗೆ ಬಂದಿದ್ದ ತೋಟ ನಾಶವಾಗಿದೆ.
ಈ ತೋಟವು ವೈ.ಎನ್. ಪಟ್ಟಾಭಿ ಮತ್ತು ಅವರ ಸಹೋದರ ವೈ ಎನ್ ಪದ್ಮನಾಭ ಅವರಿಗೆ ಸೇರಿದ ತೋಟವಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಫಿ ತೋಟಗಳು ಮತ್ತು ರೈತರ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದು ರೈತರ ಮತ್ತು ಕಾಫಿ ಬೆಳೆಗಾರರ ಹಿತ ಕಾಪಾಡಬೇಕು.
ತೋಟದಲ್ಲಿ ಆನೆಗಳು ಇರಬೇಕೇ? ಅಥವಾ ರೈತರು ಮತ್ತು ಕಾಫಿ ಬೆಳೆಗಾರರು ಇರಬೇಕೇ? ಸರ್ಕಾರಗಳೇ ಕ್ರಮ ವಹಿಸಬೇಕು ಎಂದು ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್ ಅವರು ಅಗ್ರಹಿಸಿದ್ದಾರೆ.



