
.ಸಕಲೇಶಪುರ – ಆಗಸ್ಟ್ 18 ರಂದು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದ ಮಹಿಳೆಗೆ ನ್ಯಾಯ ಕೇಳಲು ಹೋದಾಗ ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ರಾಜ್ಯ ಕಾಂಗ್ರೆಸ್’ನ ಕೆಪಿಸಿಸಿ ಸದಸ್ಯ ಯಡೆಹಳ್ಳಿ ಆರ್. ಮಂಜುನಾಥ್ ಹಾಗೂ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಸೇರಿದಂತೆ ಸಹ ಸಂಘಟಕರನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು
ಇಂದು ನ್ಯಾಯಾಂಗ ಬಂಧನದಲ್ಲಿರುವ ಯಡೆಹಳ್ಳಿ ಆರ್ ಮಂಜುನಾಥ್ ಸೇರಿದಂತೆ ಸಾಗರ್ ಜಾನೆಕೆರೆರನ್ನು ಕಾರಾಗೃಹದಲ್ಲಿ ಭೇಟಿ ಮಾಡಿ ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ್ ಕೌಶಿಕ್ ಹೆಚ್.ಎಂ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಕಬ್ಬಿನಗದ್ದೆ ಮಂಜುನಾಥ್. ಬಜರಂಗದಳ ಮಾಜಿ ಸಂಚಾಲಕ್ ಎಸ್.ಎಲ್ ಧರ್ಮೇಶ್. ಬಜರಂಗದಳ ಸಕಲೇಶಪುರ ತಾಲ್ಲೂಕಿನ ಸಹಸಂಯೋಜಕ್ ಶಿವು ಜಿಪ್ಪಿ. ರವಿ ಚಾರ್ಲಿ. ಇತರರಿದ್ದರು.



