
ಹಾಸನ – ಇಂದು ಜಿಲ್ಲಾ ಕಾರಾಗೃಹದಲ್ಲಿರುವ ಯಡೆಹಳ್ಳಿ ಆರ್. ಮಂಜುನಾಥ್ ಸೇರಿದಂತೆ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಧೈರ್ಯ ಹೇಳಿ ಮಾದ್ಯಮ ಮಿತ್ರರಿಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ ಸಮಾಜಕ್ಕಾಗಿ ಹೋರಾಟ ನಡೆಸುವಾಗ ಸವಾಲುಗಳು ಎದುರಾಗುತ್ತವೆ. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
ಆದರೆ ಒಬ್ಬ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಹಾಗೂ ಕೆಪಿಸಿಸಿಯ ಸದಸ್ಯ ಯಡೆಹಳ್ಳಿ ಆರ್. ಮಂಜುನಾಥ್ ರಂತಹ ಹೋರಾಟಗಾರರನ್ನು ಸ್ವಪಕ್ಷೀಯರ ಕುಮ್ಮಕ್ಕಿನಿಂದ ಬಂಧಿಸಿ ಅವರನ್ನು ಮಟ್ಟಹಾಕಲು ಪ್ರಯತ್ನ ಮಾಡುತ್ತಿರುವುದು ದುರುದುಷ್ಟಕರ ಹಾಗೂ ಆತಂಕಕಾರಿ ಬೆಳವಣಿಗೆ ಎಂದರು.•
ಆದರೆ ನಮ್ಮ ಹೋರಾಟದ ಹಾದಿ ಮತ್ತು ಅವರ ಹೋರಾಟದ ಹಾದಿ ವೈಚಾರಿಕ ಹಾಗೂ ಸೈದ್ಧಾಂತಿಕ ಸಿದ್ದಾಂತಗಳು ಬೇರೆ ಬೇರೆಯಾಗಿರಬಹುದು. ಆದರೆ ಹೋರಾಟಗಳು ಸಮಾಜಮುಖಿ ಹಾಗೂ ನೊಂದವರಿಗೆ ನ್ಯಾಯ ಒದಗಿಸುವ ಸಲುವಾಗಿದ್ದಾರೆ ನಾವು ಅಂತವರ ಜೊತೆ ನಿಲ್ಲುತ್ತೇವೆ ಎಂದು ಹೇಳಿದರು.
ಸ್ವಪಕ್ಷೀಯರ ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಬಂದೀಖಾನೆಯಲ್ಲಿರುವ ಹೋರಾಟಗಾರರ ಯಡೇಹಳ್ಳಿ ಆರ್. ಮಂಜುನಾಥ್’ರವರ ವಿಪರ್ಯಾಸವೇ ಸರಿ..
