ಸಕಲೇಶಪುರ.ತಾಲ್ಲೂಕಿನ ಕೆಲಗಳಲೆ ಗ್ರಾಮದ ಜೈ ಭೀಮ್ ಕ್ರಿಕೆಟರ್ಸ್ ಇವರ ವತಿಯಿಂದ ಕೆಲಗಳಲೆ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಹೋಬಳಿ ಮಟ್ಟದ ಕ್ರೀಡಾ ಕೂಟ ಕಾರ್ಯಕ್ರಮಕ್ಕೆ ಜೈ ಭೀಮ್ ಕ್ರಿಕೆಟರ್ಸ್ ಸಂಘದ ಪದಾಧಿಕಾರಿಗಳು ಸೇರಿ ಧನಸಹಾಯವನ್ನು ಶಾಲೆಯ ಮುಖ್ಯಶಿಕ್ಷಕರ ಅನುಪಸ್ಥಿತಿಯಲ್ಲಿ ಶಾಲಾಶಿಕ್ಷಕರಿಗೆ ನೀಡುವ ಮೂಲಕ ದಿನಾಂಕ: 22-8-2023ರಂದು ನಡೆಯಲಿರುವ ಈ ಕ್ರೀಡಾ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಲಾಯಿತು.

ಹಾಗೆಯೇ ಶಾಲಾ ಅಭಿವೃದ್ಧಿಗಾಗಿ ನಾವೆಲ್ಲರೂ ಸೇರಿ ಶ್ರಮಿಸುವುದಾಗಿ ತಿಳಿಸಲಾಯಿತು.

ಈ ಸಂಧರ್ಭದಲ್ಲಿ SDMC ಅಧ್ಯಕ್ಷರಾದ ವೆಂಕಟೇಶ್, ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ (ರಿ)-ಸಕಲೇಶಪುರದ ಮಾಜಿ ಪ್ರ.ಕಾರ್ಯದರ್ಶಿಗಳಾದ ಪ್ರಶಾಂತ್, ಸದಸ್ಯರುಗಳಾದ ಪ್ರತಾಪ್,ರವಿ,ಕಾಂತರಾಜ್, ಸುಶಾತ್,ಸುದರ್ಶನ್ ಉಪಸ್ಥಿತಿಯಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *