
ಸಕಲೇಶಪುರದ ಬಿ ಎಂ ರಸ್ತೆಯಲ್ಲಿ ಸಂಚರಿಸುವ ವೇಳೆ ದುರ್ವಾಸನೆ ಬೀರುತ್ತಿವ ಮೀನಿನ ಲಾರಿಗಳು! ಹೌದು ಇದು ಕೇಳಲು ಆಶ್ಚರ್ಯವೆನಿಸಿದರು ಇದೆ ಸತ್ಯ .
ನಗರದ ಬಿ ಎಂ ರಸ್ತೆಯು ಕಿರಿದಾಗಿದ್ದು ಈ ರಸ್ತೆಯಲ್ಲಿ ದಿನ ನಿತ್ಯ ಬೆಂಗಳೂರಿನಿಂದ ಮಂಗಳೂರಿಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ .
ಶನಿವಾರ ಮತ್ತು ಬಾನುವಾರ ಹಾಗೂ ಇತರೆ ರಜೆ ದಿನಗಳಲ್ಲಿ ಇಲ್ಲಿನ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಗೆ ಬರುವ ಮಲೆನಾಡಿನ ಪ್ರಕೃತಿ ಸೌಂದರ್ಯ ಓಡಾಡುವುದೇ ಕಷ್ಟ ಮತ್ತು ವಿಪರೀತ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿರುವ ವಾಹನ ಸವಾರರು ಅದರ ಮಧ್ಯೆ ಮಂಗಳೂರುನಿಂದ ಬರುವ ಮೀನು ತುಂಬಿದ ಲಾರಿಗಳು ಸರಿ ಯಾದ ಡ್ರಮ್ ಗಳನ್ನು ಹಾಕಿಕೊಂಡು ಮೀನಿನ ತ್ಯಾಜ್ಯ ಅದರೊಳಗೆ ಬೀಳುವ ಹಾಗೆ ಮಾಡದೆ ರಸ್ತೆಯಲ್ಲಿ ತ್ಯಾಜ್ಯವನ್ನು ಹರಿಸಿಕೊಂಡು ಹೋಗುತ್ತಿದ್ದಾರೆ.
ಇದರಿಂದ ರಸ್ತೆ ಬಂದಿಯಲ್ಲಿ ಇರುವ ಅಂಗಡಿ ವ್ಯಾಪಾರಿಗಳಿಗೆ ದುರ್ವಾಸನೆ ಕುಡಿದು ವ್ಯಾಪಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಟ್ರಾಫಿಕ್ ಸಮಸ್ಯೆಯಿಂದ ನಿಂತಿರುವ ವಾಹನ ಚಾಲಕರಿಗೆ ಈ ವಾಸನೆ ಕುಡಿದು ವಾಹನ ಚಾಲನೆ ಮಾಡಬೇಕಾಗಿದೆ ಎಂದು ವ್ಯಾಪಾರಿಗಳು ಹಾಗೂ ವಾಹನ ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
