ರಾಜ್ಯದ ದಲಿತ ಚಳುವಳಿಯ ನಾಯಕರಾಗಿದ್ದ, ಬಿ.ವಿ. ಚಂದ್ರಪ್ರಸಾದ್ ತ್ಯಾಗಿಯವರ ಸಹೋದರರಾದ ‘ಗುಂಡಪ್ಪ’ ಸೋಮವಾರ (21-08-2023) ರಾತ್ರಿ 9.15ಕ್ಕೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

*ತಮ್ಮ ಊರಾದ ಹಾಸನ ತಾಲ್ಲೂಕಿನ ಮಾವಿನಹಳ್ಳಿಯಲ್ಲಿ ಕೃಷಿಕರಾಗಿದ್ದ ಅವರು *ತಮ್ಮ ಅಣ್ಣ ‘ತ್ಯಾಗಿ’ಯವರಿಂದ* ಪ್ರಭಾವಿತರಾಗಿ ದಲಿತ ಸಂಘರ್ಷ ಸಮಿತಿಯ ನಿಷ್ಠಾವಂತ ಕಾರ್ಯಕರ್ತರಾಗಿಯೂ ದುಡಿದಿದ್ದ ಅವರು ಈಗಲೂ ದಲಿತ ಮತ್ತು ಜನಪರ ಚಳುವಳಿಯ ಹಿತೈಷಿಯಾಗಿದ್ದರು.

71 ವರ್ಷದ ಅವರು ಹಲವು ತಿಂಗಳುಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.*ಮೃತರ ಅಂತ್ಯಕ್ರಿಯೆಯನ್ನು ಇಂದು ಮಂಗಳವಾರ (22-08-2023) ಮಧ್ಯಾನ್ಹ 1-30ಕ್ಕೆ ಹಾಸನದ, ಸಾಲಗಾಮೆ ರಸ್ತೆಯ ಮಾವಿನಹಳ್ಳಿಯಲ್ಲಿ ನಡೆಸಲಾಗುವುದು.*ಎಂದು ಅವರ ಪುತ್ರ ಪೃಥ್ವಿ ಎಂ.ಜಿ.DYFI ಜಿಲ್ಲಾ ಕಾರ್ಯದರ್ಶಿ, DHS ಜಿಲ್ಲಾ ಸಂಚಾಲಕರು, ಹಾಸನ ಇವರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *