ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಇಂದು ಬೆಳ್ಳಂಬೆಳಿಗ್ಗೆ ಎರಡು ಕಾಡಾನೆಗಳು ಮನೆಯ ಸಮೀಪವೇ ಬಂದು ದಾಂಧಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಮಠಸಾಗರ ಗ್ರಾಮದಲ್ಲಿ ನಡೆದಿದೆ.

ಮನೆಯ ಗೇಟ್ ಮುರಿದು ಹಾಕಿ ಪಾಟ್‌‌ಗಳನ್ಜು ಧ್ವಂಸ ಮಾಡಿ ಮನೆಯ ಸಮೀಪವೇ ಕೆಲಕಾಲ ನಿಂತಿವೆ. ಕಾಡಾನೆಗಳ ವಿಡಿಯೋ ಮಾಡಲು ಯುವಕರು ಮುಂದಾಗಿದ್ದು, ಈ ವೇಳೆ ಕಾಡಾನೆಗಳು ಗಾಬರಿಯಿಂದ ಎಲ್ಲಂದರಲ್ಲಿ ಓಡಾಡಿವೆ.

ಯುವಕರ ಹುಚ್ಚಾಟಕ್ಕೆ ಎರಡು ಕಾಡಾನೆಗಳು ಮನೆ, ರಸ್ತೆಯಲ್ಲೆಲ್ಲಾ ಮನಬಂದಂತೆ ಓಡಾಡಿದ್ದು, ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ರಸ್ತೆ ದಾಟಿ ಹೋಗಿದ್ದು ಈ ವೇಳೆ ಕಾಡಾನೆಗಳನ್ನು ಕಂಡು ರಸ್ತೆಯಲ್ಲಿಯೇ ವಾಹನಗಳನ್ನು ಬಿಟ್ಟು ಬೈಕ್ ಸವಾರರು‌ ಓಡಿ ಹೋಗಿದ್ದಾರೆ. ಕಾಡಾನೆಗಳ ಜೊತೆ ಯುವಕರ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮಠಸಾಗರ, ಸುಂಡೆಕೆರೆ, ಬ್ಯಾದನೆ, ಕಬ್ಬಿನಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *