
ಬೆಂಗಳೂರಿನಲ್ಲಿ ಕೆಲ ದೀನಗಳ ಹಿಂದೆ CCB ಪೋಲಿಸಿನವರು ಪುನೀತ್ ಕೆರೆಹಳ್ಳಿ ಹಿಂದೂ ಮುಖಂಡನನ್ನು ಬಂಧನ ಮಾಡಿ ಗೂoಡಾ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದು ಪುನೀತ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು.
ಗೋರಕ್ಷಣೆ ಸಂಬಂಧ ಹಲವು ಕೇಸ್ ದಾಖಲಾಗಿದ್ದ ನೆಪವೊಡ್ಡಿ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನ ಧಮನ ಮಾಡುವ ಕಾರ್ಯ ಮಾಡುತ್ತಿದೆ ಈ ಸಂಬಂಧ ಮೊದಲೆನೆದಾಗಿ ಪುನೀತ್ ಅವರನ್ನ ಬಂಧಿಸಿದೆ ಎಂದು ರಘು ಸಕಲೇಶಪುರ ಆತಂಕ ವ್ಯಕ್ತ ಪಡಿಸಿದ್ದಾರೆ.
ಗೂoಡಾ ಕಾಯ್ದೆ ದಾಖಲಿಸಿ ಹಿಂದೂ ಮುಖಂಡರ ಮತ್ತು ಕಾರ್ಯಕರ್ತರ ಮಾನಸಿಕತೆ ಕುಗ್ಗಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಇದರಿಂದ ಕಾರ್ಯಕರ್ತ ವಿಚಿಲಿತರಾಗುವ ಪ್ರಶ್ನೆ ಇಲ್ಲ ಗೋರಕ್ಷಣೆ ನಮ್ಮ ಪ್ರಮುಖ ಆದ್ಯತೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಪುನೀತ್ ಕೆರೆಹಳ್ಳಿ ತಂದೆ ಮತ್ತು ತಾಯಿ ನನ್ನ ಮಗ ಧರ್ಮ ಕಾರ್ಯಕ್ಕೆ ಗೋರಕ್ಷಣೆಗೆ ಮುಂಚೂಣಿಯಲ್ಲಿದ್ದವನು ಅವನನ್ನ ಭಗವಂತ ರಕ್ಷಣೆ ಮಾಡುತ್ತಾನೆ ಎಂದು ದುಃಖ್ಖದಲ್ಲೂ ಪ್ರೇರಣೆಯಾಗಿ ಮಾತಾಡಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಬಜರಂಗದಳದ ತಾಲ್ಲೂಕು ಸಂಯೋಜಕ ಧರ್ಮೇಶ್, ವಿ.ಹೆಚ್.ಪಿ ಕಾರ್ಯದರ್ಶಿ ಮಂಜುನಾಥ,ಜಿಲ್ಲಾ ಸಂಯೋಜಕ ಕೌಶಿಕ್ ಉಪಸ್ಥಿತಿ ಇದ್ದರು.





