ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮದ ಮೂಕಾನನ ರೆಸಾರ್ಟ್‌ನಲ್ಲಿ ನಿನ್ನೆಯಿಂದ 5 ದಿನಗಳ ಕೌಶಲ್ಯ ತರಬೇತಿಯನ್ನು ರೆಸಾರ್ಟ್ ಮಾಲೀಕರ ಸಂಘ, ಇನ್‌ಸ್ಟಿಟ್ಯೂಟ್‌ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌, ಬೆಂಗಳೂರಿನ ಇಂಡಿಯಾ ಟೂರಿಸಂ ಹಾಗೂ ಕೇಂದ್ರ ಪ್ರವಾಸೋದ್ಯಮ ಇಲಾಖೆಗಳ ಆಶ್ರಯದಲ್ಲಿ 5 ದಿನಗಳು ರೆಸಾರ್ಟ್ ಹಾಗೂ ಹೋಂ ಸ್ಟೇ ಗಳಲ್ಲಿ ಕೆಲಸ ಮಾಡುವ ಸ್ಥಳೀಯ ನೌಕರರಿಗೆ ಹಾಗೂ ಮಾಲೀಕರಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ದಕ್ಷಿಣ ಭಾರತದ ನಿರ್ದೇಶಕರಾದ ಮಹಮ್ಮದ್ ಫಾರೂಕ್ ಮಾತನಾಡಿ ಮಲೆನಾಡಿನ ಪ್ರಕೃತಿ ದತ್ತವಾದ ಸೊಬಗಿನ ಸೌಂದರ್ಯವನ್ನು ವೀಕ್ಷಿಸಲುಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ವಿಶೇಷ ಆಸಕ್ತಿ ಹೊಂದಿದೆ ಸಕಲೇಶಪುರ ಹಸಿರು ಬೆಟ್ಟ, ಗುಡ್ಡಗಳಿಂದ ತುಂಬಿದ ಪ್ರದೇಶ ಇಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಈ ಉದ್ಯಮಗಳನ್ನು ಹೆಚ್ಚು ವರ್ಷಗಳ ಕಾಲ ಉಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ, ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಲ್ಲಿ ಕೆಲಸ ಮಾಡುವ ಸ್ಥಳೀಯ ನೌಕರರಿಗೆ ಹಾಗೂ ಮಾಲೀಕರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ.

ಇದೀಗ ಇಲ್ಲಿಯ ಪ್ರವಾಸಿ ಸ್ಥಳಗಳಿಗೆ ಜಿಲ್ಲೆ ಹಾಗೂ ರಾಜ್ಯದೊಳಗಿನ ಪ್ರವಾಸಿಗರು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಸುವುದಾಗಿದೆ ಎಂದರು. ಇಲ್ಲಿ ತರಬೇತಿ ಪಡೆಯುವವರಿಗೆಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದಲೇ ಪ್ರಮಾಣಪತ್ರ ನೀಡಲಾಗುವುದು ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿ ಪಡೆದ ವರಿಗೆ ನೀಡುವ ಪ್ರಮಾಣಪತ್ರದಷ್ಟೇ ಈ ಪ್ರಮಾಣ ಪತ್ರ ಮಾನ್ಯತೆ ಹೊಂದಿರುತ್ತದೆ’ ಎಂದರು.

ಈ ಸಂದರ್ಭದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥ ಪ್ರಮೋದ್, ರೆಸಾರ್ಟ್ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್‌ನ ಆಶಯ, ಅಂಜಲಿ, ಕೇದಾರ್‌ನಾಥ್ ಅಂಗಡಿ, ರೋಷನ್ ರೆಸಾರ್ಟ್ ಮಾಲೀಕರ ಸಂಘದಅಧ್ಯಕ್ಷ ಮಸ್ತಾರೆ ಲೋಕೇಶ್,ಕಾರ್ಯದರ್ಶಿ ಹರೀಶ್ ಕಾಡುಮಕ್ಕಿ, ಮೂಕಾನನ ರೆಸಾರ್ಟ್ ಮಾಲೀಕವೇದಾನಂದಮೂರ್ತಿ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *