
ತೆಲಂಗಾಣ : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ನಾಗರ್ ಕರ್ನೂಲು ಜಿಲ್ಲೆಯ ಅಚ್ಚಂ ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಮತ್ತು ಮಂಡಲ ಶಕ್ತಿಕೇಂದ್ರ ಮತ್ತು ಭೂತ ಅಧ್ಯಕ್ಷರಗಳ ಸಭೆಯಲ್ಲಿ ಭಾಗಿಯಾದ ಶಾಸಕರಾದ ಸಿಮೆಂಟ್ ಮಂಜು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರ ಪ್ರಾಮಾಣಿಕತೆ ಯಿಂದ ಪಕ್ಷಕ್ಕೆ ಕೆಲಸ ಮಾಡಿ ಪಕ್ಷ ನಿಮ್ಮನು ಗುರುತಿಸುತ್ತದೆ.ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ಆಸರೆಯಾಗುತ್ತದೆ ಮತ್ತು ಎಲ್ಲರನ್ನು ಗೌರವಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ತೆಲಂಗಾಣ ರಾಜ್ಯದ ಸದಸ್ಯರಾದ ಮಂಗಿಯ ನಾಯಕ್ ಮಂಡಲ ಅಧ್ಯಕ್ಷ ರೇಣಯ್ಯ,ಜಿಲ್ಲಾ ಕಾರ್ಯದರ್ಶಿ ಗಂಗಾ ಶೆಟ್ಟಿ ನಾಗರಾಜು, ಅಚ್ಚಂಪೇಟೆಯ 9ನೇ ವಾರ್ಡಿನ ಸದಸ್ಯೆ ಸುಗುಣಮ್ಮ, ಅಚ್ಚಂಪೇಟೆಯ ಪ್ರಧಾನ ಕಾರ್ಯದರ್ಶಿ ಭರತ, ಸತೀಶ್ ಮಾದಿಗ ಪ್ರಧಾನ ಕಾರ್ಯದರ್ಶಿ ನಾಗರಾಜು, ಇನ್ನಿತರ ಮುಖಂಡರು ಇದ್ದರು.
ಇದೇ ಸಂದರ್ಭದಲ್ಲಿ ತೆಲಂಗಾಣ ನಾಗರ್ ಕರ್ನೂಲು ಜಿಲ್ಲೆಯ ಅಚ್ಚಂ ಪೇಟೆಯಲ್ಲಿರುವ ಗುಪ್ತ ಓಲ್ಡ್ ಏಜ್ ವೃದ್ದಾಶ್ರಮ ಹಾಗೂ ಲೆನಿನೀಟಿ ಫೌಂಡೇಶನ್ ವೃದ್ದಾಶ್ರಮಕ್ಕೆ ಭೇಟಿ ನೀಡಿದ ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಹಣ್ಣು ಹಂಪಲುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರೇಣಯ್ಯ, ಸತೀಶ್ ಮಾದಿಗ, ಪತ್ಯ ನಾಯಕ್, ಪ್ರಭಾಕರನ್ ಇನ್ನಿತರರು ಇದ್ದರು.





