
ಸಕಲೇಶಪುರ : ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:22-08-2023 ಹಾಗೂ 24-08-2023 ರಂದು ನಡೆದ ಹೋಬಳಿ ಮಟ್ಟದ ಕ್ರೀಡಾಕೂಟವು ಹೆತ್ತೂರಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ನಡೆದಿದ್ದು, ಸದರಿ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು, ಶಾಲೆಯ ವಿದ್ಯಾರ್ಥಿಗಳು, ಭಾಗವಹಿಸಿದ್ದು ಈ ಕೆಳಗಿನ ಸ್ಪರ್ಧೆಗಳಲ್ಲಿ ವಿಜೇತರಾಗಿರುತ್ತಾರೆ ನಮ್ಮ ಶಾಲೆಯ ಸಂಕೇತ್ ಪಿ.ವಿ, ಎಂಬ ವಿದ್ಯಾರ್ಥಿಯು ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿರುತ್ತಾರೆ ಹಾಗೂ ಶಾಲೆಯ ಇಲಾಖೆಯ ಅಧಿಕಾರಿಗಳು, ಪ್ರಾಂಶುಪಾಲರು, ನಿಲಯಪಾಲಕರು ದೈಹಿಕ ಶಿಕ್ಷಕರು & ಶಾಲೆಯ ಬೋಧಕರು & ಬೋಧಕೇತರ ವರ್ಗದವರು ಹಾಗೂ ಹೆತ್ತೂರಿನ ಗ್ರಾಮಸ್ಥರು ವಿಜೇತರಿಗೆ ಶುಭ ಕೋರಿದರು






