
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2023-24 ನೇ ಕ್ರೀಡಾಕೂಟ ನೆಡೆಯಿತ್ತು, ಈ ಕ್ರೀಡಾಕೂಟದಲ್ಲಿ ಸಾನ್ವಿ ಪಬ್ಲಿಕ್ ಶಾಲೆಯ ಮಕ್ಕಳು ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳು : ರಿಷಿಕೇಶ್ ಹೆಚ್.ಕೆ. ಎತ್ತರ ಜಿಗಿತ ದ್ವಿತೀಯ, ಉದ್ದ ಜಿಗಿತ ತೃತೀಯ , 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ,
ಹಾಗೆ 200 ಮೀಟರ್ ಓಟದಲ್ಲಿ ಪ್ರೇರಣಾ ಮೌರ್ಯ ಹೆಚ್.ಸಿ ಪ್ರಥಮ ಸ್ಥಾನ , 400 ಮೀಟರ್ ಓಟದಲ್ಲಿ ವಿಕ್ತವ್ ಗೌಡ ದ್ವಿತೀಯ ಸ್ಥಾನ , ತಟ್ಟೆ ಎಸೆತ ರಚನಾ ಎಂ.ಆರ್ ಪ್ರಥಮ , ಗುಂಪು ಆಟದಲ್ಲಿ ಬಾಲಕಿಯರ ಕಬ್ಬಡಿ ಪ್ರಥಮ ಸ್ಥಾನ ಪಡೆದಿರುತ್ತಾರೆ .
ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಕೃತಿಕಾ ಕೆ. ಆರ್ ದ್ವಿತೀಯ ಸ್ಥಾನ , ಉದ್ದ ಜಿಗಿತ ಪ್ರಣವಿ. ಹೆಚ್.ಎಸ್. ದ್ವಿತೀಯ ಸ್ಥಾನ , 100 ಮೀಟರ್ ಓಟ ಅನುಷಾ. ಹೆಚ್.ಜಿ ತೃತಿಯ ಸ್ಥಾನ ಹಾಗೂ ಗುಂಪು ಆಟದಲ್ಲಿ ಬಾಲಕಿಯರ ತ್ರೋಬಾಲ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಕಬ್ಬಡಿ ತಂಡ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಥ್ರೋಬಾಲ್ ತಂಡವು ಸಕಲೇಶಪುರದಲ್ಲಿ ನೆಡೆಯುವ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿಜಯ ಶಾಲಿಯಾದ ಮಕ್ಕಳಿಗೆ ಸಾನ್ವಿ ಪಬ್ಲಿಕ್ ಶಾಲೆ ಸಂಸ್ಥೆಯ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು ಪ್ರಾಂಶುಪಾಲರು ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಪೋಷಕರು ಅಭಿನಂದನೆ ತಿಳಿಸಿದ್ದಾರೆ.





