ಹಾಸನದ ಹಿಮತ್‌ಸಿಂಗಕ ಲಿನೆಸ್ ಕೈಗಾರಿಕೆಯಲ್ಲಿ ಖಾಲಿ ಇರುವ ಟೈಲರ್‌ಗಳು, ನಿರ್ವಾಹಕರು ಮತ್ತು ಸಹಾಯಕ ಹುದ್ದೆಗಳ ನೇಮಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹಿಮತ್‌ಸಿಂಗಕ ಲಿನೆಸ್, ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ರೋಡ್, ಹನುಮಂತಪುರ ಪೋಸ್ಟ್ ಹಾಸನ, ಇಲ್ಲಿ ಆಗಸ್ಟ್ 29 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಜರುಗಲಿದೆ.

18 ರಿಂದ 30 ವರ್ಷ ವಯೋಮಾನದ 150 ಸೆ.ಮೀ. ಎತ್ತರ ಕನಿಷ್ಠ 8ನೇ ತರಗತಿ ಉತ್ತೀರ್ಣಗೊಂಡ ಮಹಿಳಾ ಅಭ್ಯರ್ಥಿಗಳು ವಿದ್ಯಾರ್ಹತೆ ದಾಖಲೆ ಪತ್ರ, ಆಧಾರ್ ಕಾರ್ಡ್ -4 ಪ್ರತಿ, ಬಯೋಡೆಟಾ, 6 ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹಾಸನ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಪೂರ್ಣೆಶ, ಮೊಬೈಲ್ ಸಂಖ್ಯೆ 9742871492 ಹಾಗೂ ಹಿಮತ್‌ಸಿಂಗಕ ಲಿನೆಸ್ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಗುರುರಾಜ್ ರಾವ್, ಮೊಬೈಲ್ ಸಂಖ್ಯೆ 9742215015 ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಕೆ.ಗೋಪಾಲ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *