
ಸಕಲೇಶಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗ ಹಾಸನ ಇವರ ವತಿಯಿಂದ 2023 ನೇ ಸಾಲಿನ ವಿಶ್ವ ಸೊಳ್ಳೆ ದಿನ ಹಿನ್ನೆಲೆಯಲ್ಲಿ ಶುಕ್ರವಾರದಂದು ಹಾಸನದಲ್ಲಿ ಆಯೋಜಿಸಿದ್ದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಸಕಲೇಶಪುರದ ರೋಟರಿ ಆಂಗ್ಲ ಶಾಲೆಯ ಒಂಬತ್ತನೇ ತರಗತಿಯ ಸವಿನಯ ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಸಕಲೇಶಪುರ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.ಹಾಸನದ 8 ತಾಲೂಕಿನಿಂದ 45 ಶಾಲೆಗಳ 48 ವಿದ್ಯಾರ್ಥಿಗಳು ಭಾಗವಹಿಸಿದರು.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಎರಡು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಗಿದ್ದರು. ರೋಟರಿ ಶಾಲೆಯ ಶಿಕ್ಷಕಿ ಚೈತನ್ಯರವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಸವಿನಯ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.ಪ್ರಶಸ್ತಿ ಗಳಿಸಿದ ವಿದ್ಯಾರ್ಥಿ ಸವಿನಯ ಹಾಗೂ ತರಬೇತಿ ನೀಡಿದ ಶಿಕ್ಷಕಿ ಚೈತನ್ಯರವರಿಗೆ ಶಾಲಾ ಆಡಳಿತ ವರ್ಗದವರಿಂದ ಹಾಗೂ ಪೋಷಕರ ವರ್ಗದವರಿಂದ ಪ್ರಶಂಸೆ ವ್ಯಕ್ತಪಡಿಸಿದರು.
“ನನ್ನ ಮಗಳು ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದು ತುಂಬಾ ಖುಷಿಯಾಗಿದೆ ಇದಕ್ಕೆ ಕಾರಣರಾದ ಶಾಲಾ ಉಪಾಧ್ಯಾಯರು ಹಾಗೂ ತರಬೇತಿ ಮಾಡಿದ ಚೈತನ್ಯ ಮೇಡಮ್ ಅವರಿಗೆ ಧನ್ಯವಾದಗಳು.”ಶ್ವೇತಾಸವಿನಯಳ ತಾಯಿ, ಹಾನುಬಾಳು



