ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್​ ಸಾಫ್ಟ್​ ಲ್ಯಾಂಡಿಂಗ್ ಮೂಲಕ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಅದಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಮಹತ್ವದ ಅಪ್​ಡೇಟ್​ವೊಂದು ಹೊರಬಿದ್ದಿದೆ.

ಚಂದ್ರಯಾನ-3 ಮಿಷನ್​ನ ರೋವರ್​​ನ ಅಸೈನ್​ಮೆಂಟ್​ಗಳು ಮುಗಿದಿದ್ದು, ಅದೀಗ ಸುರಕ್ಷಿತವಾಗಿ ನಿಲುಗಡೆ ಹೊಂದಿದ್ದು, ಸ್ಲೀಪ್​ ಮೋಡ್​ನಲ್ಲಿ ಇದೆ.ಎಪಿಎಕ್ಸ್​ಎಸ್​ ಮತ್ತು ಎಲ್​ಐಬಿಎಸ್​ ಪೇಲೋಡ್​ಗಳು ಕೂಡ ಟರ್ನ್​ ಆಫ್​ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಡರ್​ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ.

ಸದ್ಯ ಬ್ಯಾಟರಿ ಫುಲ್ ಚಾರ್ಜ್​ ಆಗಿದ್ದು, ಸೆ.22ರಂದು ಆಗಲಿರುವ ನಿರೀಕ್ಷಿತ ಸೂರ್ಯೋದಯದ ಬೆಳಕನ್ನು ಗ್ರಹಿಸುವ ನಿಟ್ಟಿನಲ್ಲಿ ಸೋಲಾರ್ ಪ್ಯಾನೆಲ್ ಅಣಿಗೊಳಿಸಲಾಗಿದೆ. ಆ ಸಂಬಂಧ ರಿಸೀವರ್ ಕೂಡ ಆನ್ ಆಗಿದೆ. ಆ ಬಳಿಕ ರೋವರ್​ನ ಇನ್ನೊಂದು ಸೆಟ್​ ಅಸೈನ್​ಮೆಂಟ್​ಗಳು ಜಾಗೃತಗೊಳ್ಳುವ ಭರವಸೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಚಂದ್ರನಲ್ಲಿನ ಭಾರತದ ರಾಯಭಾರಿ ಆಗಿ ಅದು ಅಲ್ಲೇ ಇರಲಿದೆ ಎಂದು ಇಸ್ರೋ ತಿಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *