
ಸಕಲೇಶಪುರ .ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ವಿ ಹಳ್ಳಿಯ ಅನುಗ್ರಹ ಅಕಾಡೆಮಿ( ಶ್ರೀ ಮಲ್ಲೇಶ್ವರ ವಿದ್ಯಾ ಸಂಸ್ಥೆ ) ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮವನ್ನು ಇಂದು ವಿಜ್ರಂಭಣೆಯಿಂದ ಆಚರಿಸಲಾಯಿತು.
ಪುಟಾಣಿ ಮಕ್ಕಳು ಕೃಷ್ಣನ ವೇಷಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಆಡಳಿತ ವರ್ಗದವರು,ಪೋಷಕರು ಭಾಗವಹಿಸುವ ಮೂಲಕ ಈ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಹೆಚ್. ವಿ ಹಳ್ಳಿಯ ಅನುಗ್ರಹ ಅಕಾಡೆಮಿ ಶಾಲೆಯಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಯಿತು.

