ಸಕಲೇಶಪುರ : ಹುಟ್ಟು ಹೋರಾಟಗಾರ, ಅಪ್ರತಿಮ ಹೃದಯ ವೈಶಾಲ್ಯತೆ ಇರುವ ಯುವ ನಾಯಕ ಸಮಾಜದಲ್ಲಿ ಯಾವುದೇ ರೀತಿಯ ತೊಂದರೆ ಆದಾಗಲೂ ತಕ್ಷಣ ಸ್ಥಳಕ್ಕೆ ಆಗಮಿಸಿ ಹೊರಾಟದ ಹಾದಿಯ ಮೂಲಕ ಇಡೀ ರಾಜ್ಯ ಸರ್ಕಾರವನ್ನು ಗಮನ ಸೆಳೆದ ನಮ್ಮ ಸಕಲೇಶಪುರದ ಪುಟ್ಟ ಗ್ರಾಮವಾದ ಜಾನೆಕೆರೆಯಲ್ಲಿ ಜನಿಸಿದ ಸಾಗರ್ ಎಂಬ ಹೋರಾಟಗಾರನ ಬಗ್ಗೆ ನಾವು ತಿಳಿಯಲೇ ಬೇಕಾಗಿದೆ.

ಸಾಗರ್ ಜಾನೆಕೆರೆರವರು ಏಕಾಏಕಿ ಕರ್ನಾಟಕ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷರಾಗಿ ಹೊರಹೊಮ್ಮಿದ ವ್ಯಕ್ತಿ ಅಲ್ಲ. ಹೋರಾಟದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲಾ, ಭ್ರಷ್ಟರನ್ನು ಪ್ರಶ್ನಿಸುತ್ತ ಬಡವರ,ಜನಸಾಮಾನ್ಯರ ಪಾಲಿನ ಆಶಾಕಿರಣವಾಗಿ ಇವರು ಮಾಡಿದ ಹೋರಾಟಗಳು ಹಲವು, ರಾಜ್ಯಾಧ್ಯಕ್ಷ ಆಗುವ ಮುನ್ನವೇ ಕಾವೇರಿ ಹೋರಾಟ, ಕಾಡಾನೆಗಳ ಹಾವಳಿಗೆ ಬಲಿಯಾದ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಾಡಿರುವ ಹೋರಾಟಗಳು, ಹೆಚ್. ಆರ್. ಪಿ ಹಗರಣದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಸಕಲೇಶಪುರದಿಂದ ಹಾಸನದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪಾದಯಾತ್ರೆ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು.

ಈ ಹೋರಾಟ ದಿಂದ ಹೆಚ್. ಆರ್. ಪಿ ಹಗರಣಕ್ಕೆ ಕಡಿವಾಣ ಬಿದ್ದು ಮಲೆನಾಡನ್ನು ಉಳಿಸುವ ಪ್ರಯತ್ನ ಸಾಗರ್ ಜಾನೇಕೆರೆ ಮತ್ತು ಹೋರಾಟ ಗಾರರಿಂದ ಆಗಿದೆ, ಎಲ್ಲಾ ಇಲಾಖೆಯ ಭ್ರಷ್ಟ ಅಧಿಕಾರಿಗಳಿಗೆ ಸಾಗರ್ ಜಾನೇಕೇರೆ ಮತ್ತು ಮಲೆನಾಡು ರಕ್ಷಣಾ ಸೇನೆಯ ಪದಾಧಿಕಾರಿಗಳು ಸಿಂಹ ಸ್ವಪ್ನ ಆಗಿದ್ದಾರೆ.

ಸಕಲೇಶಪುರಕ್ಕೆ ಇಂತಹ ಒಬ್ಬ ಯುವ ನಾಯಕನ ಅವಶ್ಯಕತೆ ಖಂಡಿತ ಇದೆ.ಆದರೆ ಕೆಲವು ದಿನಗಳ ಹಿಂದೆ, ಆಗಸ್ಟ್ 18ರಂದು ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಕವಿತಾ ಎಂಬ ಮಹಿಳೆ ಕಾಡಾನೆಯಿಂದ ಮೃತಪಟ್ಟ ಸಂದರ್ಭದ ಹಾಸನದಲ್ಲಿ ಸಾಗರ್ ಜಾನೆಕೆರೆ ಮತ್ತು ಮಲೆನಾಡು ರಕ್ಷಣಾಸೇನೆಯ ಪದಾಧಿಕಾರಿಗಳನ್ನು ಬಂಧಿಸಿ ಕೇಸ್ ದಾಖಲು ಮಾಡಿರುವುದು ಪೂರ್ವ ನಿಯೋಜಿತ ಷಡ್ಯಂತ್ರದಂತೆ ತೋರುತ್ತಿದೆ. ಅಧಿಕಾರಿಗಳು ಮಾಡಿರುವ ಕುತಂತ್ರಕ್ಕೆ ಸಾಗರ್ ಜಾನೇಕೆರೆ ಒಳಗೊಂಡಂತೆ 11 ಮಂದಿ ಬಲಿ ಪಶುಯಾಗಿದ್ದಾರೆ.

ಅಧಿಕಾರಿಗಳು ಹೋರಾಟಗಾರರನ್ನು ಯಾಕೆ ಅನ್ಯತಾ ಭಾವದಲ್ಲಿ ನೋಡುತ್ತಿದ್ದಯೋ ತಿಳಿಯದು…?

ಅರಣ್ಯ ವನಪಾಲಕ ಸುಂದರೇಶ್ ರವರು ಸುಟ್ಟು ಜೀವನ್ಮರಣದ ಸ್ಥಿತಿಯಲ್ಲಿ ಇದ್ದಾಗ ಅಂದು ಒಬ್ಬ ಅರಣ್ಯಪಾಲಕನ ಜೀವ ಉಳಿಸಲು ಹೆಗಲು ಕೊಟ್ಟಿದ್ದು ಇದೇ ಸಾಗರ್ ಜಾನೇಕೆರೆ ಎಂಬ ಹೋರಾಟಗಾರ, ಇದೇ ಸುಂದರೇಶ್ ಎಂಬ ಅರಣ್ಯ ಪಾಲಕರಿಗೆ ಹಸಿರು ಯೋಧ ಎಂಬ ಬಿರುದು ಸಲ್ಲಿಸಿ ಸಕಲೇಶಪುರದ ಉದ್ಯಾನವನಕ್ಕೆ ಆವರ ನಾಮಧೇಯ ಮಾಡಬೇಕು ಎಂದು ಮನವಿ ಸಲ್ಲಿಸಿದ್ದು ಇದೇ ಸಾಗರ್ ಜಾನೆಕೆರೆ.

ಮಲೆನಾಡು ರಕ್ಷಣಾ ಸೇನೆ ಕರ್ನಾಟಕದ ಹೋರಾಟಗಾರರ ಮೇಲೆ ಕೇಸ್ ದಾಖಲು ಮಾಡಿ ಹೋರಾಟಗಾರರನ್ನು ಕುಗ್ಗಿಸುವ ಪ್ರಯತ್ನ ಮಾಡಿದ ಅಧಿಕಾರಿಗಳ ನಡೆ ಮಲೆನಾಡಿನ ಜನಸಾಮಾನ್ಯರ ಮನಸ್ಸಿಗೆ ಬೇಸರ ತಂದಿದೆ.ಯುನುಸ್ ಸಕಲೇಶಪುರ ಅಧ್ಯಕ್ಷರು ನಿವೇಶನ ರಹಿತರ ಹೋರಾಟ ಸಮಿತಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *