
ಸಕಲೇಶಪುರ :-ಕನ್ನಡ ಸಾಹಿತ್ಯ ಪರಿಷತ್ತು ಹೆತ್ತೂರು ಹೋಬಳಿ ಘಟಕದ ವತಿಯಿಂದ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ **ತೇಜಸ್ವಿಯವರ ಮಲೆನಾಡಿನ ಬದುಕು ಮತ್ತು ಪರಿಸರ** ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 09-09-2023 ಶನಿವಾರ 11 ಗಂಟೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ತಾಲೂಕಿನ ಹಾಗೂ ಹೋಬಳಿಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ಹಾಗೂ ಸಾಹಿತ್ಯಭಿಮಾನಿಗಳು ಹಾಗೂ ಗ್ರಾಮಸ್ಥತರು ಭಾಗವಹಿಸುವ ಮೂಲಕ ಕಾರ್ಯಕರ್ಮವನ್ನು ಯಶಸ್ವಿ ಮಾಡಬೇಕೆಂದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವಿಕುಮಾರ್ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
