ಸಕಲೇಶಪುರ : ಜೇನು ಪೋಷಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ ಸಿ ಸುರೇಂದ್ರ ಹಾಗೂ ಉಪಾಧ್ಯಕ್ಷರಾಗಿ ಎಸ್ ಬಿ ಕೃಷ್ಣೇಗೌಡ ಆಯ್ಕೆಯಾಗಿದ್ದಾರೆ.

ಜೇನು ಪೋಷಕರ ಸಹಕಾರ ಸಂಘದ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಜೈ ಮಾರುತಿ ದೇವರಾಜ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ನೆಡೆದ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ಬಾಕಿ ಉಳಿದಿರುವ ಮುಂದಿನ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೆಚ್.ಸಿ. ಸುರೇಂದ್ರ ರವರು ಚಿಕ್ಕಮಗಳೂರು ಜಿಲ್ಲೆ, ಹುಣಸೆಮಕ್ಕಿ ಗ್ರಾಮದವರು ಅವರು ಈ ಹಿಂದೆ 1986 ರಿಂದ 1995 ರ ವರೆಗೆ ಜೇನು ಪೋಷಕರ ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪ್ಲಾಂಟರ್ ಬ್ಯಾಂಕ್, ಹಾಸನದ ಅಧ್ಯಕ್ಷರಾಗಿ ಹಾಗೂ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ವಿಶ್ವ ಯೋಗಾ ದಿನಾಚರಣೆ ಸಮಿತಿ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿರುತ್ತಾರೆ.

ಉಪಾಧ್ಯಕ್ಷರಾದ ಎಸ್.ಬಿ. ಕೃಷ್ಣೇಗೌಡ ರವರು ಬೇಲೂರು ತಾಲ್ಲೂಕು, ಸುಲಗಳಲೆ ಗ್ರಾಮದವರಾಗಿದ್ದು, ಕಳೆದ 15 ವರ್ಷಗಳಿಂದ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಇವರು ನಾರ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ನಾರ್ವೆ ಪಿ.ಎ.ಸಿ.ಸಿ.ಎಸ್.ನ ಅಧ್ಯಕ್ಷರಾಗಿ ಹಾಗೂ ಬೇಲೂರು ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ಹಾಗೂ ಬೇಲೂರು ತಾಲ್ಲೂಕು ಪಂಚಾಯಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜೈ ಮಾರುತಿ ದೇವರಾಜ್, ನಿರ್ದೇಶಕರುಗಳಾದ ಶ್ರೀ ಹೆಚ್‌.ಪಿ. ಪ್ರಮೋದ್ ಕುಮಾರ್, ಶ್ರೀ ಎಂ.ಎಲ್. ಬಸವರಾಜು, ಯು. ಎಂ. ಜಯರಾಮ್‌ , ಹೆಚ್‌.ಎಂ. ತುಳಸಿಪ್ರಸಾದ್, ಎನ್.ಕೆ. ವಿಕ್ರಂ, ಎಂ.ಆರ್. ಉದಯ ಕುಮಾರ್, ಬಿ.ಬಿ. ಸುಂದರಮ್ಮ, ಲತಾ ಬಸವರಾಜ್, ಕೆ.ಪಿ. ಶಶಿಶೇಖರ್, ಜೆ. ಎಸ್. ಈರಯ್ಯ, ಎಸ್‌.ಎಂ. ರಾಜಶೇಖರ್, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸತೀಶ್ ಅವರು ಹಾಜರಿದ್ದರು.

ಈ ಚುನಾವಣೆಯನ್ನು ರಿಟರ್ನಿಂಗ್ ಆಫೀಸರ್ ಆಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಅಧೀಕ್ಷಕರು ಕುಮಾರ್ ರವರು ನಡೆಸಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *