
ಸಕಲೇಶಪುರ :- ತಾಲ್ಲೂಕುಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬ್ಯಾಕರವಳ್ಳಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪ್ರಥಮ, ಕಬಡ್ಡಿ ಪ್ರಥಮ, 600 ಮೀ ಓಟ ಪ್ರಥಮ,400 ದ್ವಿತೀಯ,ಲಾಂಗ್ ಜಂಪ್ ತೃತೀಯ,ಸ್ಥಾನದೊಂದಿಗೆ ತಾಲ್ಲೂಕು ಸಮಗ್ರ ಪ್ರಶಸ್ತಿ ಹಾಗೂ ಬಾಲಕರ ವಿಭಾಗದ ಸಮಗ್ರ ಪ್ರಶಸ್ತಿಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪ್ರಥಮ,ಬಾಲಕರ 3000ಮೀ ಓಟ ದ್ವಿತೀಯ,ಬಾಲಕಿಯರ 3000 ಮೀ ಓಟ ದ್ವಿತೀಯ ,1500 ಮೀ ಓಟ ದ್ವಿತೀಯ ಸ್ಥಾನಗಳೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಅಭಿಷೇಕ್ ಎಚ್.ಪಿ.ರವರಿಗೆ,ಸಹಕರಿಸಿದ ಶಿಕ್ಷಕರಿಗೂ,ಹಾಗೂ ವಿಜೇತ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲರಾದ ಶತೇಂದ್ರಕುಮಾರ್ ರವರು ಶುಭ ಕೋರುತ್ತಾ ಜಿಲ್ಲಾಮಟ್ಟದಲ್ಲಿ ಶಾಲೆಯ ಕೀರ್ತಿ ತರಲೆಂದು ಹಾರೈಸಿದ್ದಾರೆ.

