ಸಕಲೇಶಪುರ : ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅರೆಕೆರೆ ಗ್ರಾಮದಲ್ಲಿ ಶುಕ್ರವಾರ ಗಾಳಿ ಮಳೆಗೆ ವಿಕಲಚೇತನ ಮಂಜಯ್ಯ ಎಂಬುವರ ಮನೆ ಕುಸಿದು ಹಾನಿ ಒಳಗಾಗಿತ್ತು , ವಿಷಯ ತಿಳಿದ ಕೂಡಲೇ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಪಂಚಾಯಿತಿ ಅಭಿರುದ್ದಿ ಅಧಿಕಾರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರ ತಂಡ ಭೇಟಿನೀಡಿದರು.

ಹಾನಿ ಒಳಗಾದ ಮನೆಯನ್ನು ಪರಿಶೀಲಿಸಿ ಮಳೆ ಹಾನಿ ಅನುದಾನದಲ್ಲಿ 5 ಲಕ್ಷದಲ್ಲಿ ಹೊಸ ಮನೆ ನಿರ್ಮಿಸಿಕೊಡಲು ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಚರ್ಚಿಸಿ ಗ್ರಾಮಾಭಿವೃದ್ದಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಧಿಕಾರಿ ಸೇರಿದಂತೆ ಎಲ್ಲರಿಗೂ ಒಮ್ಮತದಿಂದ ಸರ್ಕಾರಕ್ಕೆ ವರದಿ ಸಿದ್ದಪಡಿಸಿ ಕಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗನಾಥ್ ಶೆಟ್ಟಿ ಮಳೆ ಗಾಳಿಯಿಂದ ಬಿದ್ದು ಹೋಗಿದ್ದು, ದಲಿತ ಕುಟುಂಬಕ್ಕೆ ಸೇರಿದ ಇವರು ಕಡು ಬಡತನದಿಂದ ಕುಡಿದ್ದಾರೆ. ಜೊತೆಗೆ ಮಂಜಯ್ಯ ವಿಕಲಚೇತನ ಆಗಿದ್ದು ಕುಟುಂಬಕ್ಕೆ ಸ್ವಂತ ಹಣದಿಂದ ಹೊಸ ಮನೆ ನಿರ್ಮಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ , ಹಾಗಾಗಿ ಎಲ್ಲಾ ದಾಖಲೆಗಳೊಂದಿಗೆ ಸರ್ಕಾರಕ್ಕೆ ಕಳುಹಿಸಿ ಸರ್ಕಾರದ ಸಹಾಯಧನದಿಂದ ಒಳ್ಳೆ ಮನೆ ನಿರ್ಮಿಸಿ ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ಮಾತನಾಡಿದರು.

ಅಲ್ಲದೆ ಮನೆಯನ್ನು ಸಂಪೂರ್ಣ ಪರಿಶೀಲಿಸಿದ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿ ದರ್ಶನ್ ಹಾನಿ ಒಳಗಾದ ಮನೆಯಲ್ಲಿ ಕಂಡಿತಾ ವಾಸಮಾಡುವುದಕ್ಕೆ ಆಗುವುದಿಲ್ಲ. ಆತರದ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಹೊಸ ಮನೆಯ ನಿರ್ಮಾಣಕ್ಕೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸುತ್ತೇವೆ. ಅಧಿಕಾರಿಗಳು ಪರಿಶೀಲನೆಯ ನಂತರ ಹೊಸ ಮನೆ ಕಟ್ಟಲು ಸರ್ಕಾರದ ನಿಯಮದಂತ್ತೆ ಆದಷ್ಟು ಬೇಗಾ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಯ ಎಲ್ಲಾದರೂ ಸಮಸ್ಯೆ ಆದರೆ ಕೂಡಲೇ ಹೋಗಿ ಸ್ಪಂದಿಸುವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗನಾಥ್ ಅವರು ತಮ್ಮ ಸ್ಥಾನಕ್ಕೆ ಹಾಗೂ ಅನುಭವಕ್ಕೆ ಹಿಡಿದ ಕೈಗನ್ನಡಿಯಂತೆ , ಮಳೆಯಿಂದ ಹಾನಿಗೊಳಗಾದ ಮಂಜಯ್ಯ ಅವರಿಗೆ ಆದಷ್ಟು ಬೇಗ ಸ್ವಂತ ಮನೆಯಲ್ಲಿ ಮಲಗುವ ಸೌಭಾಗ್ಯ ದೊರೆಯುವಂತಾಗಬೇಕು.

ಈ ಸಂದರ್ಭದಲ್ಲಿ ಅರಕೆರೆ ಗ್ರಾಮ ಸದಸ್ಯರಾದ ಸರಿತಾ, ಮಾಜಿ ಉಪಾಧ್ಯಕ್ಷರಾದ ಚೆನ್ನಯ್ಯ, ಕಂದಾಯ ನಿರೀಕ್ಷಕರಾದ ಸುರೇಶ್, ಗ್ರಾಮ ಲೆಕ್ಕಿಗರಾದ ಅಶ್ವಿನಿ ಹಾಗೂ ಗ್ರಾಮಸ್ಥರು ಸೇರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *