ಸಕಲೇಶಪುರ :-“ಪೂರ್ಣಚಂದ್ರ ತೇಜಸ್ವಿ ಸರಳತೆಯ ವೆಕ್ತಿತ್ವ.ಅವರ ಆಚರಣೆ ಕೂಡ ಅಷ್ಟೇ ಕಟ್ಟು ನಿಟ್ಟು.ನಾವು ಕೂಡ ಅವರ ಜನ್ಮದಿನವನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸುವ ಮೂಲಕ ಅವರಿಗೆ ಗೌರವ ಕೊಡಬೇಕು. “ಎಂದು ಸಾಹಿತಿ ರಂಗಕರ್ಮಿ ಹೇಳಿದರು.ನೆನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಹೆತ್ತೂರು ಹೋಬಳಿ ಘಟಕದಿಂದ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ “ತೇಜಸ್ವಿಯವರ ಮಲೆನಾಡನ ಬದುಕು ಮತ್ತು ಪರಿಸರ.” ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಮೊರಾಜಿ ದೇಸಾಯಿ ವಸತಿ ಶಾಲೆ ಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಾಹಿತಿ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರ ಜೊತೆಗಿನ ಒಡನಾಟ ಬಗ್ಗೆ ವಿವರಿಸುತ್ತ “ಪೂರ್ಣಚಂದ್ರ ತೇಜಸ್ವಿ ಒಬ್ಬ ವಿಶೇಷ ಹಾಗೂ ವಿಶಿಷ್ಟ ಸಾಹಿತಿಗಳಾಗಿ ಗುರುತಿಸಿಕೊಳ್ಳುತ್ತಾರೆ. ತಂದೆಯ ಹೆಸರನ್ನು ಬಳಸಿಕೊಳ್ಳದೆ ತಮ್ಮದೇ ಆದಂತಹ ವಿಶಿಷ್ಟ ಆಲೋಚನೆ ಮೂಲಕ ಗುರುತಿಸಿಕೊಂಡರು. ನೇರ ಮಾತಿಗೆ ಹೆಸರಗಿದ್ದ ವೆಕ್ತಿತ್ವ.ಪ್ರೀತಿ ತುಂಬಿದ ಹೆದರಿಕೆ ಮಾತುಗಳು ಇವರಿಂದ ಕೇಳಿಬರುತಿದ್ದಾವು.ಇವರು ಹೆಚ್ಚು ಮಲೆನಾಡಿನ ಪ್ರಕೃತಿ ಇಷ್ಟ ಪಡುತ್ತಿದ್ದು ತಮ್ಮ ಬಹುತೇಕ ದಿನಗಳನ್ನು ಮಲೆನಾಡ ಮೂಡುಗೆರೆಯಲ್ಲಿ ಕಳೆದರು. ಪ್ರಕೃತಿ ಜೋತೆಗೆ ಮನುಷ್ಯರ ಸಂಬಂಧಗಳ ಬಗ್ಗೆ ತಮ್ಮ ಬರಹಗಳ ಮೂಲಕ ಬಿತ್ತರಿಸಿದ್ದಾರೆ.

ಕನ್ನಡ ಬಗ್ಗೆ ತುಂಬಾ ಅಭಿಮಾನ ಹೊಂದಿದ್ದ ಇವರು ಬರೆದ ಎಲ್ಲಾ ಪುಸ್ತಕಗಳಲ್ಲಿ ಮಲೆನಾಡಿನ ಸೊಗಗನ್ನು ಹೇಳುತ್ತಾ ಹೋಗುತ್ತಾರೆ. ಇವರ ಪುಸ್ತಕಗಳನ್ನು ಮಕ್ಕಳು ಓದುವ ಮೂಲಕ ತೇಜಸ್ವಿ ಅಂತೆ ಯೋಚನಾ ಶಕ್ತಿ, ಪ್ರಕೃತಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತಾಗಲಿ . ಇತರ ಶಾಲೆಗಳಲ್ಲಿ ಇವರ ಜನ್ಮದಿನ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಮಕ್ಕಳು ಪಾಲಿಸುವಂತೆ ಆಗಲಿ.”ಎಂದು ಹೇಳಿದರು.

ನಂತರ ಮಾತನಾಡಿದ ಹೆತ್ತೂರು ಮೊರಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾದ ಶಿವರಾಜ್” ಪೂರ್ಣಚಂದ್ರ ತೇಜಸ್ವಿಯವರು ನಾಡು ಕಂಡ ವಿಶೇಷ ಸಾಹಿತಿ. ಅದರಲ್ಲೂ ಮಲೆನಾಡಿನ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದ ಇವರು ಪ್ರಕೃತಿಯನ್ನು ಪ್ರೀತಿಸುತ್ತಿದ್ದರು. ಇವರ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದು ನಿಜಕ್ಕೂ ಖುಷಿಯಾದ ವಿಚಾರ. ” ಎಂದು ತಿಳಿಸಿದರು.

ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಕೆ ಸತೀಶ್ ಮಾತನಾಡಿ “ಮಲೆನಾಡಿನ ಪ್ರಕೃತಿಯನ್ನು ಹತ್ತಿರದಿಂದ ನೋಡಿ ಅಧ್ಯಯನ ನಡೆಸಿ ಪುಸ್ತಕಗಳ ರೂಪದಲ್ಲಿ ಹೊರ ತಂದ ಮೊದಲಿಗರು. ಇವರ ಆಲೋಚನೆಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು.” ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾವ್ಯ ವಚನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತ್ತು. ಕಾರ್ಯಕ್ರಮ ನಿರೂಪಣೆ ಮಾಡಿದ ಶಿಕ್ಷಕರದ ದೊಡ್ಡಕುಂದೂರು ಸುದೀನ್ ಎಲ್ಲರ ಮೆಚ್ಚಿಗೆ ಪಾತ್ರವಾದರು .

ಕಾರ್ಯಕ್ರಮದಲ್ಲಿ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷರಾದ ರವಿಕುಮಾರ್,ಕೇಂದ್ರ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕರಡಿಗಾಲ ಅರುಣ್ ಗೌಡ,ಕರ್ನಾಟಕ ಬೆಳೆಗಾರ ಸಂಘದ ನಿರ್ದೇಶಕ ಶ್ರೀಧರ್, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ,ಕನ್ನಡ ಉಪನ್ಯಾಸಕ ಯಶವಂತ, ಹೋಬಳಿ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಗಳಾದ ಅತ್ತಿಗನಹಳ್ಳಿ ಸುರೇಶ್ ,ರೇಷ್ಮೆರಾಮಚಂದ್ರ,ಖಾಜಾಂಜಿ ಕಿರ್ಕಳ್ಳಿ ಮಲ್ಲೇಶ್ ,ಪದಾಧಿಕಾರಿ ಬಾಲು ಸುಬ್ರಹ್ಮಣ್ಯ, ವೈಶಾಲಿಕೀರ್ತಿ,ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಸುಂದರ ಸಂಭ್ರಮ ಸಡಗರದಿಂದ ಆಚರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *