
ಹಾಸನ : ನಗರದಲ್ಲಿ ನಡೆದ ಡ್ರಾಮಾ ಜೂನಿಯರ್ಸ್ ಆಡಿಷನ್ ನಲ್ಲಿ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಲಾವಣ್ಯ ಬೆಂಗಳೂರಿನಲ್ಲಿ ನಡೆಯುವ ಎರಡನೇ ಸುತ್ತಿನ ಆಡಿಷನ್ ಗೆ ಆಯ್ಕೆಯಾಗಿದ್ದಾಳೆ.
ಈ ವಿದ್ಯಾರ್ಥಿನಿ ನೃತ್ಯ , ಸಂಗೀತ , ಹಾಗೂ ಓದಿನಲ್ಲೂ ಮುಂದೆ ಇದ್ದು. ಈ ವಿದ್ಯಾರ್ಥಿನಿಯ ಪ್ರತಿಭೆಗೆ ಶಾಲಾ ಆಡಳಿತ ಮಂಡಳಿ , ಹಾಗೂ ಶಿಕ್ಷಕ ವೃಂದ ಮತ್ತು ಹೆತ್ತೂರಿನ ಜನತೆ ಅಂತಿಮ ಸುತ್ತಿನಲ್ಲೂ ಆಯ್ಕೆಯಾಗಿ ಬರಲಿ ಎಂದು ಹಾರೈಸಿದ್ದಾರೆ.


