ಸಕಲೇಶಪುರ: ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸಂಬಂದಿಸಿದಂತೆ ಪ್ರಸ್ತಾವನೆ ಮತ್ತು ಇಲ್ಲಿಯವರೆಗಿನ ಬೆಳವಣಿಗೆಯ ಅವಲೋಕನ ನಡೆಸಲಾಯಿತು.

ಕರ್ನಾಟಕ ಎಲಿಫ್ಯಾಂಟ್ ಟಾಸ್ಕ್ ಫೋರ್ಸ್ ವರದಿ ಏನು ಹೇಳುತ್ತೆ ಮತ್ತು ವರದಿ ಏಕೆ ಅನುಷ್ಠಾನ ಆಗಲಿಲ್ಲ ?ಈ ಸಮಸ್ಯೆಗೆ ಒಂದಂಶದ ಪರಿಹಾರ ಇಲ್ಲ ಹಾಗಾದರೆ ಪರಿಹಾರಗಳು ಏನೇನು ? ಮುಂದೇನು ?ತಕ್ಷಣದ ಪರಿಹಾರಗಳು ಮತ್ತು ದೀರ್ಘಕಾಲಿನ ಪರಿಹಾರಗಳು ?ಗಟ್ಟಿಯಾದ ಜನ ಚಳುವಳಿ ಕಟ್ಟಲು ಏನು ಮಾಡಬೇಕು ?ಈ ಬಗ್ಗೆ ಚರ್ಚಿಸಲಾಯಿತು.

ಮುಂದಿನ ಸಭೆ ಹಾಸನದಲ್ಲಿ ನಡೆಸಲು ತೀರ್ಮಾನಿಸಲಾಯಿತು.ಕಾಡಾನೆ ಸಮಸ್ಯೆಗೆ ಸಂಬಂಧಿಸಿದಂತೆ ಹೋರಾಟಗಾರರ ಮೇಲೆ ಹಾಕಲಾಗಿರುವ ಮೊಕದ್ದಮೆ ವಾಪಸ್ಸು ಪಡೆಯಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಕಾಡಾನೆ ವಿರುದ್ದ ಆತ್ಮ ರಕ್ಷಣೆಗೆ ಕೊವಿ ಬಳಸುವ ಬಗ್ಗೆ ಮಾರ್ಮಿಕವಾಗಿ ನುಡಿದ ಬಗ್ಗೆ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಹೇಳಿಕೆ ಆದರಿಸಿ ಅವರ ಗನ್ ಸೀಜ್ ಮಾಡಿರುವುದು ಸರಿಯಾದ ಕ್ರಮವಲ್ಲ, ಜಿಲ್ಲಾಡಳಿತ ಅವರ ಗನ್ ವಾಪಾಸು ನೀಡಬೇಕು ಎಂದು ಒತ್ತಾಯಿಸಲಾಯಿತು.

ಆನೆಗಳ ಬಗೆಗಿನ ಸಂಶೋಧಕ ದೀಪಕ್ ಭಟ್ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ್ ಮೂರ್ತಿ ವಹಿಸಿದ್ದರು, ಚರ್ಚೆಯಲ್ಲಿ , ಹೆಮ್ಮಿಗೆ ಮೋಹನ್ , ಪ್ರಸಾದ್ ರಕ್ಷಿದಿ, ಹೆಚ್ ಎ ಕಿಶೋರ್ ಕುಮಾರ್ಮಲ್ನಾಡ್ ಮೆಹಬೂಬ್ ,ಎಸ್ ಎನ್ ಮಲ್ಲಪ್ಪ, ಅರುಣ್ ರಕ್ಷಿದ್ದಿ, ಸುಬ್ರಹ್ಮಣ್ಯ, ಹೆಚ್ ಎಂ ವಿಶ್ವನಾಥ್, ಬೆಕ್ಕನಹಳ್ಳಿ ನಾಗರಾಜ್, ಎಡೆಹಳ್ಳಿ ಆರ್ ಮಂಜುನಾಥ್, ಜಾನೇಕೆರೆ ಸಾಗರ್, ಅಣ್ಣೇಗೌಡ, ಗೊದ್ದು ಉಮೇಶ್, ಅರೆಹಳ್ಳಿ ರಾಜೇಗೌಡ, ಬಿ ಎ ಜಗನ್ನಾಥ್ , ಮರಗೊತ್ತುರು ಉಮೇಶ್,ಸುರೇಂದ್ರ, ಐಗೂರು ಅರ್ಜುನ್, ಸ ಬಾ ಸೋಮಶೇಖರ್, ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *