
ಸಕಲೇಶಪುರ : ಪ್ರತಿಯೊಂದು ಕುಟುಂಬಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆಯನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ಜೆ.ಜೆ.ಎಮ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಮನೆಯೊಂದರ ಮುಂಭಾಗ ಗಂಗಾ ಪೂಜೆ ಮಾಡಿ ನಲ್ಲಿಯ ಮುಖಾಂತರ ನೀರು ಹಾಯಿಸಿ ಕಾಮಗಾರಿ ಉದ್ಘಾಟನೆ ಮಾಡಿದ ನಂತರ ಮಾತನಾಡಿ ಬ್ಯಾಕರವಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಮನಹಳ್ಳಿ, ಜಾನೇಕೆರೆ, ಕೊಣ್ಣೂರು, ಇಬ್ಬಡಿ ಹಾಗೂ ಹರಗರಹಳ್ಳಿ ಗಳಲ್ಲಿ 5.38 ಕೋಟಿ ವೆಚ್ಚದಲ್ಲಿ ಸಾವಿರಾರು ಮನೆಗಳಿಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್‌ನಡಿ ಕುಡಿಯುವ ಯೋಜನೆ ಕಾಮಗಾರಿ ಮಾಡಲಾಗುತ್ತಿದೆ.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಶಾಂತಪುರ ಗ್ರಾಮದಲ್ಲಿ 28 ಲಕ್ಷ ರೂ ವೆಚ್ಚದಲ್ಲಿ 41 ಮನೆಗಳಿಗೆ ದಿನದ 24 ಗಂಟೆ ಒದಗಿಸುವ ಕಾಮಗಾರಿ ಮುಕ್ತಾಯಗೊಂಡಿದ್ದು ಇದರಿಂದ 41 ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಹಿನ್ನೆಲೆಯಲ್ಲಿ ‘ಭವಿಷ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗದಿರಲು ಈ ಯೋಜನೆಯನ್ನು ನನ್ನ ಮತಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ’ ಎಂದರು.
ಈ ಸಂಧರ್ಭದಲ್ಲಿ ಪಿಡಿಓ ದರ್ಶನ್, ಗ್ರಾಮ ಪಂಚಾಯತಿ ಸದಸ್ಯೆ ಲೀಲಾ, ಗ್ರಾಮ ಕಾರ್ಯದರ್ಶಿ ನಿಂಗಯ್ಯ, ಮಾಜಿ ಸದಸ್ಯ ಸಿದ್ದರಾಜು, ಸುಳ್ಳಕ್ಕಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಣ್ಣ ,ಬಿಜೆಪಿ ಮುಖಂಡರುಗಳಾದ ಅರೆಕೆರೆ ನರೇಶ್, ವಳಲಹಳ್ಳಿ ಅಶ್ವಥ್, ಜಾನೆಕೆರೆ ಲೋಕೇಶ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ರಮೇಶ್, ಅಭಿಯಂತ ಹರೀಶ್ ಸೇರಿದಂತೆ ಇತರರು ಹಾಜರಿದ್ದರು.
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ಜೆ.ಜೆ.ಎಮ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಮನೆಯೊಂದರ ಮುಂಭಾಗ ಗಂಗಾ ಪೂಜೆ ಮಾಡಿ ನಲ್ಲಿಯ ಮುಖಾಂತರ ನೀರು ಹಾಯಿಸಿ ಶಾಸಕ ಸಿಮೆಂಟ್ ಮಂಜು ಕಾಮಗಾರಿ ಉದ್ಘಾಟನೆ ಮಾಡಿದರು.


