
ಸಕಲೇಶಪುರ.ತಾಲ್ಲೂಕಿನ ಹೆತ್ತೂರು ಹೋಬಳಿಯ ಕುಮ್ತಹಳ್ಳಿ ಗ್ರಾಮದಲ್ಲಿ ನೆನ್ನೆಯಷ್ಟೇ ಕಾಣಿಸಿ ಕೊಂಡಿದ್ದ ಚಿರತೆಯೊಂದು ಇಂದು ಅತ್ತಿಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಇಲ್ಲಿಯ ವರೆಗೂ ಆನೆ, ಕಾಡುಕೋಣ, ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿಗೆ ನೊಂದಿದ್ದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಈಗಾಗಲೇ ಬೋನಿಗೆ ಬಿದ್ದ ಇಲಿಯಂತಾಗಿದ್ದ ರೈತರ ಬದುಕು ಇನ್ನು ಮುಂದೇನು ಅನ್ನುವಂತಾಗಿದೆ.
ಹೀಗೆಯೇ ಕಾಡು ಪ್ರಾಣಿಗಳ ಹಾವಳಿ ಮುಂದುವರೆದರೆ ಪ್ರಾಣಿಗಳನ್ನು ನೋಡಲು ಜನ ಮೃಗಾಲಯದ ವರೆಗೆ ಹೋಗುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಕಾಡುಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.
ಕೂಡಲೆ ಇದಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಚಿರತೆಯನ್ನು ಸೆರೆಹಿಡಿದು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ.
ಇಂತಿ ನಿಮ್ಮ :-ಯೋಗೇಶ್ ಪಟೇಲ್ ಅತ್ತಿಹಳ್ಳಿ.
