ವರದಿ… ಎಸ್ ಎಂ ಮಂಜುನಾಥ ಮತ್ತು ಎಂ ಬಿ ಉಮೇಶ್ ಸಂಪಾದಕರು TV 46 MALENADU CHANNEL

ಸಕಲೇಶಪುರ. ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆ ,ಕಾಟಿಗಳ ಹಾವಳಿಯಿಂದ ಬೇಸತ್ತು ಹೋಗಿರುವ ರೈತರಿಗೆ ಇದೀಗ ಚಿರತೆ ಸಮಸ್ಯೆ ಎದುರಾಗಿದೆ.ತಾಲ್ಲೂಕಿನ ಹೆತ್ತೂರು ಹೋಬಳಿಯ ಕುಮ್ತಹಳ್ಳಿ ಗ್ರಾಮದಲ್ಲಿ ನೆನ್ನೆಯಷ್ಟೇ ಕಾಣಿಸಿ ಕೊಂಡಿದ್ದ ಚಿರತೆಯೊಂದು ಇಂದು ಅತ್ತಿಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹಾಗೂ ಭಯದ ವಾತಾವರಣ ಮೂಡಿಸಿದೆ.

ಇಲ್ಲಿಯ ವರೆಗೂ ಆನೆ, ಕಾಡುಕೋಣ, ಹಾಗೂ ಇನ್ನಿತರ ಕಾಡು ಪ್ರಾಣಿಗಳ ಹಾವಳಿಗೆ ನೊಂದಿದ್ದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ದಿನದ ಹಿಂದೆ ಕುಮ್ತಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಶ್ವಾನವನ್ನು ಹೊತ್ತೊಯ್ದ ಚಿರತೆಯೊಂದು ನಿನ್ನೆ ಅತ್ತಿಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಇಂದು ಬಾಚಹಳ್ಳಿ , ಹಳ್ಳಿಬೈಲು , ಹಾಗೂ ಹೀಕಾ ರೆಸಾರ್ಟ್ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ ಇಂದು ಹಳ್ಳಿಬೈಲು ಇಖಾ ರೆಸಾರ್ಟ್ ಹತ್ತಿರ ಚಿರತೆಯ ಹಜ್ಜೆ ಗುರುತು ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು ಜನರು ಹೊರಗಡೆ ತಿರುಗಾಡಲು ಭಯಪಡುತ್ತಿದ್ದಾರೆ.

ಈಗಾಗಲೇ ಬೋನಿಗೆ ಬಿದ್ದ ಇಲಿಯಂತಾಗಿದ್ದ ರೈತರ ಬದುಕು ಇನ್ನು ಮುಂದೇನು ಅನ್ನುವಂತಾಗಿದೆ.ಹೀಗೆಯೇ ಕಾಡು ಪ್ರಾಣಿಗಳ ಹಾವಳಿ ಮುಂದುವರೆದರೆ ಪ್ರಾಣಿಗಳನ್ನು ನೋಡಲು ಜನ ಮೃಗಾಲಯದ ವರೆಗೆ ಹೋಗುವ ಅವಶ್ಯಕತೆ ಇಲ್ಲ ಎನಿಸುತ್ತದೆ ಎಂದು ಗ್ರಾಮದ ರೈತರಾದ ಯೋಗೇಶ್ ಪಟೆಲ್ ಹತ್ತಿಹಳ್ಳಿ ಅವರು ಪತ್ರಿಕೆಗೆ ತಿಳಿಸಿದ್ದಾರೆ .

ಈ ಬಗ್ಗೆ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿ ಹಾಸನ ಜಿಲ್ಲಾಧ್ಯಕ್ಷರಾದ ಕಿಶೋರ್ ಮಾತನಾಡಿ ಮಲೆನಾಡು ಭಾಗವು ಚಿರತೆಗಳು ವಾಸಿಸಲು ಯೋಗ್ಯವಾದ ಸ್ಥಳವಲ್ಲ, ಬಯಲು ಸೀಮೆ ಹಾಗೂ ಅರೇಮಲೆನಾಡು ಭಾಗಗಳಲ್ಲಿ ಕುರುಚಲು ಗಿಡ ,ಕಲ್ಲು ಬಂಡೆಗಳ ಪೊಟರೆಗಳಲ್ಲಿವಾಸಿಸುವ ಚಿರತೆಗಳನ್ನು ಹಿಡಿದು ಮಲೆನಾಡು ಭಾಗದ ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ಇಲಾಖೆಯವರು ಬಿಡುವುದರಿಂದ ಈ ಸಮಸ್ಯೆ ಎದುರಾಗುತ್ತಿದ್ದು ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟಗಳಲ್ಲಿ ಚಿರತೆಗಳು ವಾಸಿಸಲು ಸಾಧ್ಯವಿಲ್ಲ , ಇಲ್ಲಿನ ಜಾನುವಾರುಗಳು, ಸ್ವಾನಗಳು ಮತ್ತು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ ಹಾಗಾಗಿ ಅರಣ್ಯ ಇಲಾಖೆಯವರು ಕೂಡಲೇ ಅರೆಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಹಿಡಿದಂತಹ ಚಿರತೆಗಳನ್ನು ಪಶ್ಚಿಮ ಘಟ್ಟಕ್ಕೆ ಬಿಡುವುದನ್ನು ನಿಲ್ಲಿಸಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದರು ‌.

ಕಾಡುಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಕೂಡಲೆ ಇದಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಚಿರತೆಯನ್ನು ಸೆರೆಹಿಡಿದು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ .

ಹೇಳಿಕೆ…..1 :- ಮಲೆನಾಡು ಭಾಗವು ಚಿರತೆಗಳು ವಾಸಿಸಲು ಯೋಗ್ಯವಾದ ಸ್ಥಳವಲ್ಲ ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ ಚಿರತೆಗಳು ವಾಸಿಸುವುದಿಲ್ಲ ,ಬಯಲು ಸೀಮೆಯಲ್ಲಿ ಹಿಡಿದಂತಹ ಚಿರತೆಗಳನ್ನು ಪಶ್ಚಿಮ ಘಟಕ್ಕೆ ಬಿಡುವುದನ್ನು ಅರಣ್ಯ ಇಲಾಖೆಯವರು ನಿಲ್ಲಿಸಬೇಕು.ಕಿಶೋರ್ ಮಲೆನಾಡು ಜನಪರ ಹೋರಾಟ ಸಮಿತಿ ಅದ್ಯಕ್ಷರು.

ಹೇಳಿಕೆ……2 :- ಮಲೆನಾಡು ಭಾಗವಾದ ಕೆಲವು ಪ್ರದೇಶಗಳಾದ ಕುಮ್ತಹಳ್ಳಿ ,ಕಾಗೆನಹರಿ, ಯಂತಹ ಪ್ರದೇಶಗಳು ಕುರುಚಲು ಗಿಡ ಮತ್ತು ಬೆಟ್ಟ ಗುಡ್ಡಗಳು ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಚಿರತೆಗಳು ವಾಸಿಸುತ್ತವೆ, ಆದರೆ ಇದುವರೆಗೂ ಈ ಭಾಗದಲ್ಲಿ ಮನುಷ್ಯರ ಮೇಲೆ ಚಿರತೆಗಳು ದಾಳಿ ಮಾಡಿರುವ ಘಟನೆಗಳು ನಡೆದಿಲ್ಲ ಜಾನುವಾರುಗಳು ಹಾಗೂ ನಾಯಿಗಳನ್ನು ಹಿಡಿಯುವ ಚಿರತೆಗಳು ಮುಂದಿನ ದಿನಗಳಲ್ಲಿ ಮನುಷ್ಯರ ಮೇಲೆ ದಾಳಿಮಾಡುವ ಮುನ್ನ ಅರಣ್ಯ ಇಲಾಖೆಯವರು ಈ ಚಿರತೆಗಳನ್ನು ಹಿಡಿದು ಬಯಲುಸೀಮೆಯ ಪ್ರದೇಶಗಳಿಗೆ ಬಿಡಬೇಕು ಎಂದು ಮನವಿ ಮಾಡುತ್ತೇನೆ.ಗೊದ್ದು ಉಮೇಶ್ ಪರಿಸರವಾದಿಗಳು ಸಕಲೇಶಪುರ.

ಹೇಳಿಕೆ…..3 :-ಮಲೆನಾಡು ಭಾಗದ ಜನರು ಕಾಡಾನೆ ಕಾಟಿಗಳ ಸಮಸ್ಯೆಯನ್ನು ಎದುರಿಸುತ್ತಿದ್ದು ಇದೀಗ ಚಿರತೆ ಸಮಸ್ಯೆ ಗ್ರಾಮದಲ್ಲಿ ಎದುರಾಗಿದ್ದು , ಗ್ರಾಮಸ್ಥರು ತಮ್ಮ ತೋಟ ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತು ಚಿರತೆಯನ್ನು ಸ್ಥಳಾಂತರಿಸಬೇಕು. ಪ್ರದೀಪ್ ಬಾಚಿಹಳ್ಳಿ.ಕಾಫಿ ಬೆಳೆಗಾರರು.

ಹೇಳಿಕೆ…..4 :- ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಗ್ರಾಮ ನಮ್ಮ ಊರು ಇಲ್ಲಿ ಮೂರು ಚಿರತೆಗಳನ್ನು ಸೆರೆ ಹಿಡಿಯಲಾಯಿತು, ಹಿಡಿದ ಚಿರತೆಗಳನ್ನು ಎಲ್ಲಿಗೆ ಬಿಡುತ್ತೀರ ಎಂದು ಅರಣ್ಯ ಇಲಾಖೆಗೆ ಕೇಳಿದ ಪ್ರಶ್ನೆಗೆ ಪಶ್ಚಿಮ ಘಟದ ಬಿಸ್ಲೆಗೆ ಬಿಡಲಾಗುವುದು ಎಂದು ತಿಳಿಸಿದರು.ಶ್ಯಾಮ್ ಗೌಡ ದಂಡಿಗನಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *