ಸಕಲೇಶಪುರ : ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಈ ಬಾರಿ ವರುಣನ ಆರ್ಭಟ ಮಂದವಾಗಿದ್ದು ನಮ್ಮ ಮಲೆನಾಡಿನ ಭಾಗದಲ್ಲಿ ಮಳೆಯ ಪ್ರಮಾಣ ಅತಿ ಕಡಿಮೆಯಾಗಿದೆ ಮತ್ತು ಮಲೆನಾಡು ಭಾಗದ ಜನರು ರೈತರು ಕುಡಿಯಲು ಕೂಡ ನೀರಿಲ್ಲದೆ ನರಳುವ ಸ್ಥಿತಿ ಎದುರಾಗಿದೆ. ಕೂಡಲೇ ಬರ ಸಮೀಕ್ಷೆ ಮಾಡಬೇಕೆಂದು ರಾಜ್ಯ ಸರ್ಕಾರ ಮತ್ತು ಮಾಧ್ಯಮದ ಮುಖಾಂತರ ಮನವಿ ಮಾಡಿದ್ದೆವು.

ನಮ್ಮ ಮನವಿಗೆ ಸಹಕರಿಸಿ ಇಂದು ಬರಗಾಲ ಸಮೀಕ್ಷೆ ಪಟ್ಟಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯವೇ ಆಗಿದೆ.

ರಾಜ್ಯ ಸರ್ಕಾರದ ಗಮನ ಮಲೆನಾಡಿನ ಬರಪೀಡಿತ ಪ್ರದೇಶಗಳ ಮೇಲೆ ಬೀಳಲು ಮುಖ್ಯ ಪಾತ್ರ ವಹಿಸಿದ ನನ್ನ ಆತ್ಮೀಯ ಮಾದ್ಯಮ ಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು. ಹೀಗೆ ನಿಮ್ಮ ಪ್ರೀತಿ ಸಹಕಾರ ನಮ್ಮ ಮೇಲೆ ಸಾದಾ ಕಾಲ ಇರಲಿ ಎಂಬುದು ನಮ್ಮಯ ಆಶಯ. ಇಂತಿ : -ಸಾಗರ್ ಜಾನೇಕೆರೆಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *