
ಸಕಲೇಶಪುರ : ಪುರಸಭೆ ವ್ಯಾಪ್ತಿಗೆ ಒಳಪಡುವಂತ ಯಾವುದೇ ಮನೆಗಳಲ್ಲಿ ಶೌಚಾಲಯ ತುಂಬಿದ ತಕ್ಷಣ ಬಂದು ಅದನ್ನು ಕ್ಲಿಯರ್ ಮಾಡುವ ಸಕ್ಕಿಂಗ್ ಮಿಷನ್ ಕಳೆದ 15 ದಿನಗಳಿಂದ ಕೆಟ್ಟು ನಿಂತಿದ್ದು, ಇದರ ಬಗ್ಗೆ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು.
ಪಟ್ಟಣ ವ್ಯಾಪ್ತಿಯ 23 ವಾರ್ಡುಗಳಿಗೆ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಸಕ್ಕಿಂಗ್ ಮಿಷನ್ ಇದೀಗ ಕೆಟ್ಟು ನಿಂತಿದ್ದು ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದ್ದು ಆದಷ್ಟು ಬೇಗ ಸಕ್ಕಿಂಗ್ ಮಿಷನ್ ದುರಸ್ತಿಗೊಳಿಸ ಬೇಕು ಮತ್ತು ಇದಕ್ಕಿಂತ ಹೆಚ್ಚು ಸಾಮಾರ್ಥ್ಯವುಳ್ಳ ವಾಹನದ ಅವಶ್ಯಕತೆ ಇರುವ ಕಾರಣ ಪುರಸಭೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಪೂಜಾರಿ ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ.

