
ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ಆಲೂರು ಹಾಗೂ ಬೇಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತಾತಿದ್ದು, ಭಾರಿ ಸಾವು, ನೋವು ಹಾಗೂ ರೈತರುಗಳ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ನಾಶಮಾಡುತ್ತಾ ಬಂದಿದ್ದಾವೆ, ಈ ಕಾಡಾನೆಗಳ ಜೊತೆಗೆ ಈ ಹಿಂದೆ ಕೊಡಗು ಭಾಗಕ್ಕೆ ಹೋಗಿದ್ದ ಒಂಟಿ ಸಲಗ ಈಗ ಮತ್ತೆ ಸಕಲೇಶಪುರ ಭಾಗಕ್ಕೆ ಬಂದಿರುವುದು ಈ ಭಾಗದ ರೈತರಿಗೆ ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕಳೆದ 6 ತಿಂಗಳ ಹಿಂದೆ ಕೊಡುಗು ಭಾಗದಲ್ಲಿದ್ದ ತಣ್ಣೀರು ಎಂಬ ಒಂಟಿ ಸಲಗ ಒಂದು ತಿಂಗಳಿನಿಂದ ಸಕಲೇಶಪುರಕ್ಕೆ ಎಂಟ್ರಿ ಕೊಟ್ಟಿದ್ದು, ಇಂದು ಹಳೇ ಬಾಗೆ ಸಮೀಪ ಕಾಫಿತೋಟವೊಂದರಲ್ಲಿ ಅಳವಡಿಸಲಾಗಿದ್ದ ಸೋಲಾರ್ ಬೇಲಿಯನ್ನು ಮುರಿದು ಕಾಫಿತೋಟಕ್ಕೆ ಎಂಟ್ರಿ ಕೊಟ್ಟಿರುವ ದೃಶ್ಯಗಳು ಮೊಬೈಲ್ ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದರಿಂದ ಆತಂಕಗೊಂಡಿರುವ ಹಳೇಬಾಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ತೋಟದ ಕೂಲಿಕಾರ್ಮಿಕರು ತೋಟಗಳಿಗೆ ಹೋಗಲು ಭಯಬೀತರಾಗಿದ್ದು ಕೂಡಲೇ ತಣ್ಣೀರು ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಹಿಡಿದು ಬೇರೆಡೆ ಸಾಗಿಸಬೇಕೆಂದು ಒತ್ತಾಯಿಸಿದ್ದಾರೆ.


