
ಸಕಲೇಶಪುರ : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ನಡೆದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಕಲೇಶಪುರದ ಉಪವಿಭಾಗಾಧಿಕಾರಿ ಶೃತಿ ಮಾತನಾಡಿ ಪ್ರಪಂಚದಲ್ಲಿ ಶ್ರೇಷ್ಠವಾದ ಸಂವಿಧಾನ ನಮ್ಮ ಸಂವಿಧಾನವಾಗಿದ್ದು ಹಲವಾರು ಜಾತಿ ,ಧರ್ಮ, ಭಾಷೆಗಳ ಮದ್ಯೆ ಇರುವ ವಿವಿದತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತವಾಗಿದ್ದು ಇಂತಹ ಸನ್ನಿವೇಶಗಳಲ್ಲಿ ಜಾತಿ ದರ್ಮಗಳ ನಡುವೆ ಗಲಾಟೆ ಘರ್ಷಣೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವಂತದ್ದು ಹಾಗಾಗಿ ನಮ್ಮ ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾವೆಲ್ಲರೂ ಕೂಡ ಸಂವಿಧಾನವನ್ನು ಓದುವ ಮೂಲಕ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡೋಣ ಎಂದು ಹೇಳಿದರು.
ಸರ್ಕಾರಿ ಜೂನಿಯರ್ ಕಾಲೇಜು ಉಪನ್ಯಾಸಕ ಮಂಜುನಾಥ್ ಮಾತನಾಡಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಅರ್ಥಮಾಡಿಕೊಳ್ಳಬೇಕಾಗಿದೆ ಸಂವಿಧಾನ ಮೂರು ತತ್ವಗಳನ್ನು ಹೊಂದಿದ್ದು ಸ್ವಾತಂತ್ರ್ಯ ,ಸಮಾನತೆ ಹಾಗೂ ಭ್ರಾತೃತ್ವವನ್ನು ಅರ್ಥಮಾಡಿಕೊಳ್ಳಬೇಕಾಗಿದ್ದು ಜಾತೀಯತೆ, ಮೇಲು ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಲು ಒಂದೇ ಮಾರ್ಗ ಅದು ಸಂವಿಧಾನದ ಪ್ರಸ್ತಾವನೆಯನ್ನು ನಾವೆಲ್ಲ ಓದುವ ಮೂಲಕ ಅರ್ಥಮಾಡಿಕೊಂಡಾಗ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ ಡಾ.ಬಿ.ಆರ್ ಅಂಬೇಡ್ಕರ್ ಹೇಳುತ್ತಾರೆ ಸಂವಿಧಾನದ ಪ್ರಸ್ತಾವನೆವೆಂಬುದು ಆತ್ಮ ಮತ್ತು ಹೃದಯವಿದ್ದಂತೆ ಒಬ್ಬ ವ್ಯಕ್ತಿ ಬದುಕಬೇಕಾದರೆ ಹೃದಯ ಎಷ್ಟು ಮುಖ್ಯವೋ ಅದೇ ರೀತಿ ನಾವು ಈ ರಾಷ್ಟ್ರದಲ್ಲಿ ಜೀವಿಸಬೇಕಾದರೆ ಸಂವಿಧಾನ ಮತ್ತು ಪ್ರಸ್ತಾವನೆ ಎಂಬುದು ತುಂಬ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಮುನ್ನ ತಾಲ್ಲೂಕು ಕಛೇರಿ ಆವರಣದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು ನಂತರ ಸಭಾ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ರೈತಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಆರಂಬಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೇಘನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ರಾಮಕೃಷ್ಣ, ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್, ಪುರಸಭೆ ಮುಖ್ಯಾಧಿಕಾರಿ ಹೆಚ್.ಆರ್.ರಮೇಶ್, ಕಸಾಪ ಅದ್ಯಕ್ಷೆ ಶಾರದಾ ಗುರುಮೂರ್ತಿ,ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು , ವಿವಿದ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


