ಆಲೂರು: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಕೂಡಲೇ ಘೋಷಣೆ ಮಾಡಬೇಕು ಎಂದು ಜೆಡಿಎಸ್‌ ಮುಖಂಡ ಎಚ್. ಕೆ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತಡವಾಗಿಯದರೂ 196 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿರುವುದನ್ನು ಸ್ವಾಗತಿಸುತ್ತೇನೆ.

ಸರ್ಕಾರಕ್ಕೆ ರೈತರ ಉಳಿವು ಬಗ್ಗೆ ಮನಸ್ಸಿಲ್ಲ ಎಂಬುದು ವಿಳಂಬನೀತಿಯಿಂದ ಅರ್ಥವಾಗುತ್ತದೆ ಎಂದು ಟೀಕಿಸಿದರು.ಬರಗಾಲ ತೀವ್ರ ಮತ್ತು ಸಾಧಾರಣ ಎಂದು ವಿಂಗಡಿಸಲಾಗಿದೆ. ಆದರೆ ಸಾಧಾರಣ ಬರದ ಪಟ್ಟಿಯಲ್ಲೂ ಆಲೂರು ತಾಲ್ಲೂಕನ್ನು ಸೇರಿಸದೆ ಕಡೆಗಣಿಸಲಾಗಿದೆ.

ಯಾವ ವರದಿ ಆಧಾರದಲ್ಲಿ ತಾಲ್ಲೂಕನ್ನು ಕಡೆಗಣಿಸಿದ್ದಾರೆ?

ಎರಡು ತಿಂಗಳಿನಿಂದ ಮಳೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 70 ಮಳೆ ಪ್ರಮಾಣ ಕಡಿಮೆಯಾಗಿದೆ. ಕೆರೆ, ಕಟ್ಟೆಗಳು ಒಣಗುತ್ತಿವೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಹಾಸನ, ಕಟ್ಟಾಯ, ಶಾಂತಿಗ್ರಾಮ ಹೋಬಳಿಗಳೂ ಬರ ಪೀಡಿತವಾಗಿವೆ ಎಂದರು.ಮುಸುಕಿನ ಜೋಳದ ಮಾತೆಗಳು ಜೊಳ್ಳಾಗಿ ಒಣಗುತ್ತಿವೆ. ನಾಟಿ ಮಾಡಿರುವ ಗದ್ದೆಗಳಲ್ಲಿ ನೀರಿಲ್ಲದೆ ಒಣಗಿದೆ. ಶೇ 75 ಕ್ಕೂ ಹೆಚ್ಚು ನಷ್ಟವಾಗಿದೆ. ಪಾಳ್ಯ, ಕಸಬಾ ಹೋಬಳಿಯಲ್ಲಿ ಮುಸುಕಿನ ಜೋಳ ಸಂಪೂರ್ಣ ಚೀಕಲಾಗಿದೆ. ಈವರೆಗೆ ಖರ್ಚು ಮಾಡಿರುವ ಕನಿಷ್ಠ ಬಿತ್ತನೆ ಬೀಜದ ಬೆಲೆ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಆಲೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆಗಳಿಗೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *