
ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಯೋಜನೆಯನ್ನ ತರಲಿದೆ.
ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವ್ರು ಕೆಂಪು ಕೋಟೆಯಲ್ಲಿ ಘೋಷಿಸಿದ ವಿಶ್ವಕರ್ಮ ಯೋಜನೆಗೆ ಇಂದು (ಸೆಪ್ಟೆಂಬರ್ 17) ಚಾಲನೆ ನೀಡಲಿದ್ದಾರೆ.ಅದ್ರಂತೆ, ಇಂದು ವಿಶ್ವಕರ್ಮ ಜಯಂತಿಯಿದ್ದು, ಇದೇ ದಿನ ಕೇಂದ್ರ ಸರ್ಕಾರ ಈ ಹೊಸ ಯೋಜನೆ ತರುತ್ತಿದೆ. ಅಂದ್ಹಾಗೆ, ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನವು ಕೂಡ ಅನ್ನೋದು ಗಮನಾರ್ಹ.30 ಲಕ್ಷ ಕುಟುಂಬಗಳಿಗೆ ಲಾಭ.!ವಿಶ್ವಕರ್ಮ ಯೋಜನೆ ಆನ್ಲೈನ್ನಲ್ಲಿ ಅರ್ಜಿ : ವಿಶ್ವಕರ್ಮ ಯೋಜನೆ ಮೂಲಕ ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನ ಉತ್ತೇಜಿಸಲು ಆರ್ಥಿಕ ನೆರವು ನೀಡುತ್ತದೆ.
ಸರಳ ಷರತ್ತುಗಳೊಂದಿಗೆ ಅರ್ಹ ಕರಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಕೇಂದ್ರದ ಪ್ರಕಾರ ವಿಶ್ವಕರ್ಮ ಯೋಜನೆಯಿಂದ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ.2 ಲಕ್ಷದವರೆಗಿನ ಸಾಲ.!
ವಿಶ್ವಕರ್ಮ ಯೋಜನೆ ಪ್ರಯೋಜನಗಳು : ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳ ಆಧಾರದ ಮೇಲೆ, ಆಯಾ ವರ್ಗಗಳಿಂದ ವಿಶ್ವಕರ್ಮ ಯೋಜನೆಗೆ ಅರ್ಹ ವ್ಯಕ್ತಿಗಳನ್ನ ಗುರುತಿಸಲಾಗುತ್ತದೆ. ಮೊದಲ ಕಂತಿನಲ್ಲಿ ಶೇ.5ರ ಸಬ್ಸಿಡಿ ಬಡ್ಡಿಯೊಂದಿಗೆ 1 ಲಕ್ಷ ರೂಪಾಯಿ ಸಾಲದ ನೆರವು ಮಂಜೂರು ಮಾಡಲಾಗುವುದು. ಬಳಿಕ ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ. ಕುಶಲಕರ್ಮಿಗಳು ತಮ್ಮ ಕೌಶಲ್ಯ, ಟೂಲ್ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ನವೀಕರಿಸಲು ಈ ಸಾಲಗಳನ್ನ ಮಂಜೂರು ಮಾಡಲಾಗಿದೆ.
ದಿನಕ್ಕೆ 500 ರೂಪಾಯಿಯೊಂದಿಗೆ ತರಬೇತಿ..!ವಿಶ್ವಕರ್ಮ ಯೋಜನೆ ಮೂಲಕ ಎರಡು ರೀತಿಯ ಕೌಶಲ್ಯ ಕಾರ್ಯಕ್ರಮಗಳಿವೆ. ಬೇಸಿಕ್ ಮತ್ತು ಅಡ್ವಾನ್ಸ್ಡ್ ಇವೆ. ತರಬೇತಿ ಪಡೆಯುತ್ತಿರುವಾಗ ಫಲಾನುಭವಿಗಳಿಗೆ ಕೇಂದ್ರವು ದಿನಕ್ಕೆ 500 ರೂಪಾಯಿ ಸ್ಟೈಫಂಡ್ ನೀಡುತ್ತದೆ. ಇದು ಸುಧಾರಿತ ಉಪಕರಣಗಳನ್ನ ಖರೀದಿಸಲು ಹಣಕಾಸಿನ ನೆರವು ನೀಡುತ್ತದೆ.ಅಗತ್ಯ ದಾಖಲೆಗಳು.!ಆಧಾರ್ ಕಾರ್ಡ್, ಗುರುತಿನ ಚೀಟಿ, ವಿಳಾಸ ದಾಖಲೆ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್ಬುಕ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅಗತ್ಯವಿದೆ.ವಿಶ್ವಕರ್ಮ ಯೋಜನೆ ಅರ್ಹತೆ.!ಬಡಿಗೇರರು, ದೋಣಿ ತಯಾರಕರು, ಆಯುಧ ತಯಾರಕರು, ಕಮ್ಮಾರರು, ಕಬ್ಬಿಣದ ಉಪಕರಣ ತಯಾರಕರು, ಬೀಗದ ಕೆಲಸಗಾರರು, ಅಕ್ಕಸಾಲಿಗರು, ಕುಂಬಾರರು (ಮಡಕೆ ತಯಾರಕರು), ವಿಗ್ರಹ ತಯಾರಕರು (ಮೂರ್ತಿಕರ್, ಕಲ್ಲು ಕೆತ್ತುವವರು, ಕಲ್ಲು ಒಡೆಯುವವರು), ಚರ್ಮಕಾರರು (ಶೂ ತಯಾರಕರು), ಮೇಸ್ತ್ರಿಗಳು, ಬುಟ್ಟಿ/ ಚಾಪೆ/ಬ್ರೂಮ್ ತಯಾರಕರು/ಲಿನಿನ್ ತಯಾರಕರು, ಸಾಂಪ್ರದಾಯಿಕ ಆಟಿಕೆ ತಯಾರಕರು, ಕ್ಷೌರಿಕರು, ಹೂವಿನ ಹಾರ ತಯಾರಕರು, ಟ್ಯಾನರ್ಗಳು, ಟೈಲರ್’ಗಳು, ಮೀನು ಬಲೆ ತಯಾರಕರು ಅರ್ಹರು.
ವಿಶ್ವಕರ್ಮ ಯೋಜನೆಗೆ ಮೋದಿ ಚಾಲನೆ : ಇತ್ತೀಚೆಗಷ್ಟೇ ಕೇಂದ್ರ ಕ್ಯಾಬಿನೆಟ್ ಕೂಡ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಕೇಂದ್ರದಿಂದ 15 ಸಾವಿರ ಕೋಟಿ ಮಂಜೂರು ಮಾಡಿದೆ. ಸಾಂಪ್ರದಾಯಿಕ ಕರಕುಶಲ ಕೌಶಲ್ಯಗಳನ್ನ ಉತ್ತೇಜಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿಯೇ ಈ ಯೋಜನೆಯನ್ನ ಪರಿಚಯಿಸಲಾಗುತ್ತಿದೆ.
ವಿಶ್ವಕರ್ಮ ಜಯಂತಿಯಂದು ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. 70 ಕ್ಷೇತ್ರಗಳ 70 ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ.
