
ಸಕಲೇಶಪುರ ಪೋಲೀಸ್ ಉಪ ವಿಭಾಗದ ಅಧಿಕಾರಿಯಾಗಿದ್ದ ಮಿಥುನ್ ರವರ ವರ್ಗಾವಣೆಯಾದ ಸ್ಧಾನಕ್ಕೆ ದಕ್ಷಿಣ ಕನ್ನಡದ ಕಡಬದ ಪ್ರಮೋದ್ ಕುಮಾರ್ ಬಿ. ಅವರನ್ನು ನೇಮಕ ಮಾಡಿ ಸರ್ಕಾರ ಅದೇಶ ಹೊರಡಿಸಿದೆ.
ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು , ಇದೀಗ ಸಕಲೇಶಪುರಕ್ಕೆ ವರ್ಗಾವಣೆ ಗೊಂಡಿದ್ದಾರೆ.2016ರಲ್ಲಿ ಮುಖ್ಯ ಮಂತ್ರಿಗಳಿಂದ ಉತ್ತಮ ಪೋಲೀಸ್ ಪದಕ ಹಾಗೂ 2023ರಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದಾರೆ . ಇದೀಗ ಸಕಲೇಶಪುರ ಉಪ ವಿಭಾಗಕ್ಕೆ(ಡಿವೈಎಸ್ಪಿ) ಅಧಿಕಾರಿಯಾಗಿ ನೇಮಕರಾಗಿದ್ದಾರೆ.
