
ಸಕಲೇಶಪುರ : ಪಟ್ಟಣದ ಸರಕಾರಿ ಬಾಲಕೀಯರ ಕಾಲೇಜಿನ ಕಿಟಕಿಯ ಗಾಜುಗಳನ್ನು ನೆನ್ನೆ ರಾತ್ರಿ ಕಿಡಿಗೇಡಿಗಳು ಹೊಡೆದು ಪುಡಿಮಾಡಿದ್ದಾರೆ.
ಕಾಲೇಜಿನ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ರೋಟರಿ ಪ್ಲೇ ಹೋಂ,ನಂಜಮ್ಮ ಮಹಿಳಾ ಸಮಾಜವಿದ್ದು ಅದು ಅಲ್ಲದೆ ಕಾಲೇಜಿನ ವಿಶಾಲವಾದ ಮೈದಾನವಿದ್ದು ಇಲ್ಲಿ ಆಗಾಗ ಕಿಡಿಗೇಡಿಗಳು ಆಟದ ಮೈದಾನದಲ್ಲಿ ಮದ್ಯಪಾನ ಮಾಡುವುದು ಅಲ್ಲೇ ಎದುರಿಗೆ ಇರುವ ಕಾಲೇಜಿನ ಕಿಟಕಿ ಗಾಜುಗಳಿಗೆ ಕಲ್ಲು ಹೊಡೆಯುವ ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸಂಬಂದಪಟ್ಟ ಅದಿಕಾರಿಗಳು ಅಥವಾ ಪೊಲಿಸ್ ಇಲಾಖೆ ಸಿಸಿ ಕ್ಯಾಮರ ಅಳವಡಿಸಿದರೆ ಕಿಡಿಗೇಡಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು ಹಾಗಾಗಿ ಕೂಡಲೇ ಇದರ ಬಗ್ಗೆ ಗಮನಹರಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿ ಮನವಿ ಮಾಡಿದೆ.



