
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಮದ್ಯಂತರ ತಡೆ ನೀಡಿರುವ ಸುಪ್ರೀಂಕೋರ್ಟ್ ಆದೇಶಕ್ಕೆ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಎಸ್.ಎಸ್.ಅಸ್ಲಂ ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಸನ ಜೆಲ್ಲೆಯ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಅನರ್ಹತೆ ಗೆ ಸಂಬಂದಿಸಿದಂತೆ ಇಂದು ಹೈಕೋರ್ಟ್ ಆದೇಶಕ್ಕೆ ಮದ್ಯಂತರ ತಡೆ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದು ಪ್ರಜ್ವಲ್ ರೇವಣ್ಣ ಅವರ ಏಳಿಗೆಯನ್ನು ಸಹಿಸದ ವಿರೋಧ ಪಕ್ಷಗಳು ಈ ಷಡ್ಯಂತರ ಮಾಡಿದ್ದು ಅವರ ಆಸೆ ಈಡೇರಿಕೆ ಸಾದ್ಯವಿಲ್ಲ.
ನಮ್ಮ ಪಕ್ಷದ ಯುವ ನಾಯಕರಾದ ಪ್ರಜ್ವಲ್ ರೇವಣ್ಣ ಅವರು ಇಂತಹ ಷಡ್ಯಂತರಗಳಿಗೆ ಬಗ್ಗುವುದಿಲ್ಲ ಅವರು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಎಲ್ಲವನ್ನು ಜಯಸಾದಿಸಿ ಬರುತ್ತಾರೆ ಎಂದು ಅಲ್ಪ ಸಂಖ್ಯಾತ ಜೆಡಿಎಸ್ ಮುಖಂಡ ಎಸ್.ಎಸ್.ಅಸ್ಲಂ ಅಬಿಪ್ರಾಯಪಟ್ಟಿದ್ದಾರೆ.
