ನವದೆಹಲಿ: ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಮರುಸಕ್ರಿಯ ಪ್ರಕ್ರಿಯೆ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಮಾಡಲಿದೆ.

ಹೌದು, ನಿನ್ನೆ ಆಕ್ಟೀವ್‌ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ ಇನ್ನೂ ಆಕ್ಟಿವೇಟ್ ಆಗಿಲ್ಲ. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ಮರುಸಕ್ರಿಯ ಪ್ರಕ್ರಿಯೆ ಅನ್ನು ಇಂದು ಮಾಡಲಾಗುತ್ತಿದೆ. ಕೆಲವು ಕಾರಣಾಂತರಗಳಿಂದಾಗಿ ಲ್ಯಾಂಡರ್ ಮತ್ತು ರೋವರ್ ಇನ್ನು ಸ್ಲೀಪ್‌ ಮೂಡ್‌ನಲ್ಲಿ ಇವೆ. ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ಅವುಗಳಿಂದ ಬಂದಿಲ್ಲ. ಸಂಪರ್ಕವನ್ನು ಸಾಧಿಸುವ ಪ್ರಯತ್ನ ಮುಂದುವರೆಸುತ್ತೇವೆ. ಹೀಗಾಗಿ ಒಂದು ದಿನದ ಮಟ್ಟಿಗೆ ಅದನ್ನು ಮುಂದೂಡಲಾಗಿದೆ ಎಂದು ಇಸ್ರೋ ಈ ಕುರಿತು ಸಾಮಾಜಿಕ ಜಾಲತಾಣದವಾದ X ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ.

ಸೆಪ್ಟೆಂಬರ್​ 22ರ ಸಂಜೆ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್‌ ಅನ್ನು ಮರು ಸಕ್ರಿಯಗೊಳಿಸಲು ನಾವು ಈ ಮುಂದೆ ಯೋಜಿಸಿದ್ದೆವು. ಆದರೆ ಕೆಲವು ಕಾರಣಗಳಿಂದಾಗಿ ನಾವು ಅದನ್ನು ಅಂದರೆ ಸೆ 23ಕ್ಕೆ ನಡೆಸಲಿದ್ದೇವೆ. ಲ್ಯಾಂಡರ್ ಮತ್ತು ರೋವರ್ ಅನ್ನು ನಿದ್ರಾವಸ್ಥೆಯಿಂದ ಹೊರತಂದು ಮತು ಚಾಲನೆ ನೀಡಲು ನಾವು ಯೋಜನೆ ಒಂದನ್ನು ಹೊಂದಿದ್ದೇವೆ ಎಂದು ಸ್ಪೇಸ್ ಅಪ್ಲಿಕೇಷನ್ ಸೆಂಟರ್‌ ನಿರ್ದೇಶಕ ನೀಲೇಶ್ ದೇಸಾಯಿ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *