ಚೀನಾದ ಹ್ಯಾಂಗ್‌ ಝೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಮಂಗಳವಾರ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ತಂಡ ಕುದುರೆ ಸವಾರಿ (ಡೆಸ್ಸೇಜ್‌ ಟೀಮ್‌ ಇವೆಂಟ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ‌

2023 ರ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಕುದುರೆ ಸವಾರಿ ತಂಡವು ಇತಿಹಾಸವನ್ನು ನಿರ್ಮಿಸಿದ್ದು, ಕುದುರೆ ಸವಾರಿ ಈವೆಂಟ್‌ನಲ್ಲಿ, ತಂಡವು ಅಗ್ರಸ್ಥಾನಕ್ಕೇರಿ ಚಿನ್ನ ಪದಕವನ್ನು ಗೆದ್ದುಕೊಂಡಿದೆ. ಆ ಮೂಲಕ ಬರೊಬ್ಬರಿ 41 ವರ್ಷಗಳ ಬಳಿಕ ಭಾರತ ಕುದುರೆ ಸವಾರಿ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಈ ಕ್ರೀಡೆಯಲ್ಲಿ 1982 ರ ಬಳಿಕ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ.

ಕುದುರೆ ಸವಾರಿ ಈವೆಂಟ್‌ನಲ್ಲಿ ಭಾರತ ತಂಡವು ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 204.882 ರೊಂದಿಗೆ ಬೆಳ್ಳಿಯೊಂದಿಗೆ ಮತ್ತು ಹಾಂಗ್ ಕಾಂಗ್ ಚೀನಾ 204.852 ರೊಂದಿಗೆ 3 ನೇ ಸ್ಥಾನದಲ್ಲಿ ಕಂಚಿನ ಪದಕ ಪಡೆದುಕೊಂಡಿದೆ. ಸುದೀಪ್ತಿ ಹಜೇಲಾ, ಹೃದಯ್ ವಿಪುಲ್ ಛೇಡಾ, ಅನುಷ್ ಗರ್ವಾಲಾ ಮತ್ತು ದಿವ್ಯಕೃತಿ ಸಿಂಗ್ ಅವರ ಭಾರತ ತಂಡವು ಕುದುರೆ ಸವಾರಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಈ ಕುದರೆ ಸವಾರಿ ಸ್ಪರ್ಧೆಯಲ್ಲಿ ತಂಡದ ಒಟ್ಟಾರೆ ಸ್ಕೋರ್‌ಗೆ ಅಗ್ರ 3 ತಂಡಗಳ ಸ್ಕೋರ್ ಅನ್ನು ಮಾತ್ರ ಪರಿಗಣಿಸಲಾಗುತ್ತದೆ.ಏಷ್ಯನ್ ಗೇಮ್ಸ್‌ನಲ್ಲಿ ಕುದುರೆ ಸವಾರಿಯಲ್ಲಿಯೇ ಭಾರತ ನಾಲ್ಕನೇ ಚಿನ್ನದ ಪದಕ ಗೆದ್ದಂತಾಯಿತು. ಕ್ರೀಡಾ ಕೂಟದಲ್ಲಿ ಒಟ್ಟಾರೆ 13ನೇ ಪದಕವಾಗಿದೆ. ಕುದುರೆ ಸವಾರಿಯಲ್ಲಿ ಭಾರತದ ಎಲ್ಲಾ 3 ಚಿನ್ನದ ಪದಕಗಳು 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *