ಸಕಲೇಶಪುರ : ಹಳೆ ಬಸ್ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಿಗಳಿಗೆ ನ್ಯಾಯಾಲಯದ ಆದೇಶ ನೆಮ್ಮದಿ ತಂದಿದೆ.

ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರಿಗಳನ್ನು ಅವರಿಗೆ ಪರ್ಯಾಯ ಸ್ಥಳವನ್ನು ಒದಗಿಸದೆ ನೀಡದೆ ಅವರನ್ನು ಅಲ್ಲಿಂದ ಹೊರಕಳಿಸಲು ಮುಂದಾಗಿದ್ದ ಪುರಸಭೆಯ ಈ ನಡೆಯಿಂದ ಕಂಗಲಾಗಿದ್ದ ವ್ಯಾಪಾರಿಗಳು ಬೀದಿ ಬದಿಯ ವ್ಯಾಪಾರಿಗಳ ಕಾಯಿದೆ 2014 ರಲ್ಲಿ ನೀಡಿರುವ ನಮ್ಮ ಹಕ್ಕನ್ನು ರಕ್ಷಿಸುವಂತೆ ಸಕಲೇಶಪುರ ಸಿವಿಲ್ ನ್ಯಾಯಾಲಯದ ನ್ಯಾಯಾಲಯದ ಮೊರೆ ಹೋಗಿದ್ದ ವ್ಯಾಪಾರಿಗಳು, ವ್ಯಾಪಾರಿಗಳ ಹಕ್ಕನ್ನು ರಕ್ಷಿಸಿದ ನ್ಯಾಯಾಲಯ.

ಮುಂದಿನ ಆದೇಶದವರೆಗೂ ಬೀದಿ ಬದಿಯ ವ್ಯಾಪಾರಿಗಳನ್ನು ಪುರಸಭೆಯು ಸ್ಥಳಾಂತರ ಮಾಡದಂತೆಯು ಹಾಗೂ ಅವರ ವ್ಯಾಪಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟು ಮಾಡದಂತೆ ಆದೇಶಿದೆ.

ನ್ಯಾಯಾಲಯದ ಆದೇಶವನ್ನು ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯು ಸ್ವಾಗತಿಸಿದೆ .ವ್ಯಾಪಾರಿಗಳ ಪರವಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ವಕೀಲ ಪ್ರದೀಪ್ ರವರು ವಾದ ಮಂಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *