ಸಕಲೇಶಪುರ .ತಾಲ್ಲೂಕಿನ ಹೆತ್ತೂರು ಹೋಬಳಿಯ ಬೊಮ್ಮನಕೆರೆ, ವಡ್ರಹಳ್ಳಿ, ಕರಡಿಗಾಲ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಚೀರಿ, ಚಿನ್ನಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ,ವಳಲಹಳ್ಳಿ ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದೆ ಪ್ರತಿದಿನ ಈ ಗ್ರಾಮದ ಜನರು ಮೂರರಿಂದ ನಾಲ್ಕು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು, ಅಲ್ಲದೆ ಈ ಭಾಗದಲ್ಲಿ ಕಾಡಾನೆಗಳು ಹೆಚ್ಚಾಗಿದ್ದು, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಪ್ರತಿನಿತ್ಯ ಆಸ್ಪತ್ರೆ, ಬ್ಯಾಂಕ್‌, ನಾಡ ಕಛೇರಿ, ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಬಸ್ ವೆವಸ್ಥೆ ಇಲ್ಲದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದರು.

ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಬಸ್ ವ್ಯವಸ್ಥೆ ಬೇಕೆಂದು ಗ್ರಾಮಸ್ಥರು ಕ್ಷೇತ್ರದ ಶಾಸಕರು ಹಾಗೂ ಬಸ್ ಡಿಪೋ ಮ್ಯಾನೇಜರ್ ಮನವಿ ಪತ್ರ ಸಲ್ಲಿಸಿದ್ದರು.

ಮಾನ್ಯ ಶಾಸಕರು ಹಾಗೂ ಬಸ್ ಡಿಪೋ ಮ್ಯಾನೇಜರ್ ಬಸ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಗ್ರಾಮಸ್ಥರ ಅನುಕೂಲಕ್ಕಾಗಿ ಸಕಲೇಶಪುರದಿಂದ ಬೆಳಿಗ್ಗೆ 9.15ಕ್ಕೆ ಹೊರಡುವ ಗೊದ್ದು ಸೋಮವಾರಪೇಟೆ ಬಸ್‌ ಬ್ಯಾಕರವಳ್ಳಿ ಮಾರ್ಗವಾಗಿ ಚಲಿಸುತ್ತಿದ್ದು, ಬಸ್ಸನ್ನು ಹರಗರಹಳ್ಳಿ ಬೊಮ್ಮನಕೆರೆ ಕರಡಿಗಾಲ-ವಳಲಹಳ್ಳಿ ಹಾಡ್ಲಹಳ್ಳಿ ಮಾರ್ಗವಾಗಿ ಚಲಿಸುವಂತೆ ಮಾಡಬೇಕಾಗಿ ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಸಮಸ್ಯೆಗೆ ಸ್ವಂದಿಸಿದ ಸಕಲೇಶಪುರ ಡಿಪೋ ಮ್ಯಾನೇಜರ್ ವಿಪಿನ್ ಕೂಡಲೇ ಮೇಲಧಿಕಾರಿಗಳಿಗೆ ಬಸ್ ಮಾರ್ಗವನ್ನು ಬದಲಾವಣೆ ಮಾಡಿಕೊಡುವ ಬಗ್ಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದರು.

ಇದರ ಫಲವಾಗಿ ,ಇಂದು ಬಸ್ ಗೆ ಅದಿಕೃತವಾಗಿ ಕರಡಿಗಾಲ ಗ್ರಾಮದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಶಾಸಕರು ಚಾಲನೆ ನೀಡಿದರು.

ಈ ಖುಷಿಗೆ ಕರಡಿಗಾಲ ಗ್ರಾಮದ ಮಹಿಳೆಯರು ರಸ್ತೆ ಯನ್ನು ಸ್ವಚ್ಛ ಗೊಳಿಸಿ ರಂಗೋಲಿ ಹಾಕಿದರು, ಗಂಡಸರು ಬಸ್ ಗೆ ಬಸ್ ಮಾವಿನ ತೋರಣ ಹಾಗೂ ಹೂ ಹಾಕುವ ಮೂಲಕ ಶೃಂಗಾರ ಮಾಡಿದರು, ಮಕ್ಕಳು ಊರಿಗೆ ಬರುತ್ತಿರುವ ಬಸ್ ಗೆ ಬಲೂನ್ ಕಟ್ಟುವುದರೊಂದಿಗೆ ಖುಷಿ ಪಟ್ಟರು ನಂತರ ಶಾಸಕರು ಬಸ್ ಗೆ ಪೂಜೆ ಮಾಡಿ, ಚಾಲನೆ ನೀಡಿ ಈ ಸರ್ಕಾರಿ ಬಸ್ಸಿನ ಸೌಕರ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಳಲಹಳ್ಳಿ ಅಶ್ವಥ್,ಕಾಮನಹಳ್ಳಿ ಕೀರ್ತಿ,ಪ್ರತಾಪ್,ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ಬಸ್ ಗೆ ಚಾಲನೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *