
ಆಲೂರು :-ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದ ಕೋರ್ಟ್ ಮುಭಾಂಗ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲು ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲರಾದ ರೋಹಿತ್ ಮಾತನಾಡಿ,ಇದರ ಮುಖ್ಯ ಉದ್ದೇಶವೆಂದರೆ ನಮ್ಮ ಹಿಂದಿನ ಯುವ ಪೀಳಿಗೆಯಲ್ಲಿ ಈ ಸಮಾಜದ ಉನ್ನತಿಗಾಗಿ ಶ್ರಮದಾನ ಮಾಡುವಂತಹ ಉದ್ದೇಶದಿಂದ ರಾಷ್ಟ್ರೀಯ ಸೇವಾ ಘಟಕವನ್ನು ಹಮ್ಮಿಕೊಂಡಿದ್ದು , ಇಂದು ಕೋರ್ಟ್ ಆವರಣದ ಸುತ್ತಮುತ್ತಲು ಕಸ ಹಾಗೂ ಘನ ತ್ಯಾಜ್ಯವಸ್ತುಗಳು ಮತ್ತು ಗಿಡ ಗಂಟೆಗಳನ್ನು ಕಡಿದು ಸ್ವಚ್ಛತೆ ಮಾಡಲಾಯಿತು.
ಹಾಗೂ ಪರಿಸರ, ನಾಡು, ಕಾಡನ್ನು ಕಾಪಾಡದೇ ಹೋದರೆ ಮುಂದಿನ ಪೀಳಿಗೆಯ ಜನರು ಹೆಗಲಿಗೆ ಆಕ್ಸಿಜನ್ ಡಬ್ಬಿ ಇಟ್ಟುಕೊಂಡು ಜೀವನ ನಡೆಸುವ ಸ್ಥಿತಿ ಬರಲಿದೆ. ಹೀಗಾಗಿ ಪರಿಸರ ಉಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದರು.
ಸ್ವಯಂ ಸೇವಕ ನಾಗೇಂದ್ರ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬಂತೆ ಯುವಜನತೆಯು ನಿರಂತರ ಚಿಂತನೆ, ಪ್ರಯತ್ನ ಮಾಡುವುದರ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮ ವಹಿಸಬೇಕು ಹಾಗೂ ಮುಂದಿನ ಪೀಳಿಗೆಯೂ ಕೂಡ ಯುವಕ ಯುವತಿಯರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಅಲ್ಲದೆ ರಸ್ತೆ ಒಳ ಚರಂಡಿ ಕೊಳಚೆನೀರು ಹಾಗೂ ದೇವಸ್ಥಾನ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಮಾಡಿ ಜನರಿಗೆ ಸ್ವಚ್ಛತೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ನಮ್ಮ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ನಮ್ಮ ಸಮಾಜಕ್ಕಾಗಿ ವಿದ್ಯಾರ್ಥಿಗಳಿಂದ ಒಂದಿಷ್ಟು ಕೊಡುಗೆಗಳನ್ನು ಕೊಡುತ್ತಿರುವುದು ಶ್ರಮದಾನದ ಮೂಲಕ ಎಂದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.




