ಹಾಸನ :- ನಗರದ ಹೃದಯ ಭಾಗದ ಸಮೀಪ ಇರುವ ಶ್ರೀನಗರದ ಗುಂಡಿಯಲ್ಲಿ ಅವ್ಯವಸ್ಥೆಯ ಗೂಡಾಗಿದ್ದು, ರಸ್ತೆ ಮೇಲೆ ವಿವಿಧ ವಾಹನಗಳ ರಿಪೇರಿ ಬಿಡಿಭಾಗಗಳು ಇಟ್ಟು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಮಂಗಳವಾರದಂದು ಇಲ್ಲಿನ ಅಂಗಡಿ ಮಾಲೀಕರು ಆಕ್ರೋಶವ್ಯಕ್ತಪಡಿಸಿದ್ದಾರೆ.

ವಿವಿಧ ವಾಹನಗಳ ರಿಪೇರಿ ಇಲ್ಲವೇ ಹಳೆಯ ವಸ್ತುಗಳನ್ನು ಕೊಂಡುಕೊಳ್ಳಲು ಬಿ.ಎಂ. ರಸ್ತೆ, ಶ್ರೀನಗರ ಬಳಿ ಇರುವ ಗುಂಡಿ ಸ್ಥಳಕ್ಕೆ ಬರುವುದು ಸಾಮಾನ್ಯವಾಗಿದ್ದು, ಆದರೇ ಇಲ್ಲಿನ ಅಂಗಡಿ ಮಾಲೀಕರು ತಮ್ಮ ವ್ಯವಹಾರವನ್ನು ತಮಗೆ ನೀಡಿದ ಸ್ಥಳದಲ್ಲಿ ಮಾಡಬೇಕು. ಆದರೇ ರಸ್ತೆಯ ಬಹುತೇಕ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ.

ಇಲ್ಲಿ ಪ್ರತಿನಿತ್ಯ ಅನೇಕ ವಾಹನಗಳು ಸಂಚರಿಸುತ್ತದೆ. ಶಾಲಾ ವಾಹನಗಳು, ಅಂಬ್ಯುಲೆನ್ಸ್ ವಾಹನಗಳು ಸಂಚರಿಸಬೇಕಾದರೇ ಹರಸಾಹಸ ಪಡಬೇಕು. ಇಷ್ಟೊಂದು ಸಮಸ್ಯೆಗಳಿದ್ದರೂ ಇತ್ತ ಕಡೆ ಸಂಬಂಧಪಟ್ಟವರು ಬಂದು ಸರಿಪಡಿಸಿರುವುದಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

ಇದೆ ವೇಳೆ ಕರವೇ ತಾಲೂಕು ಉಪಾಧ್ಯಕ್ಷ ತೋಫಿಕ್ ಪಾಷ ಮಾಧ್ಯಮದೊಂದಿಗೆ ಮಾತನಾಡಿ, ನಗರದ ಬಿ.ಎಂ. ರಸ್ತೆ ಬಳಿ ಇರುವ ಶ್ರೀನಗರದ ಬಳಿ ಇರುವ ಗುಂಡಿ ರಸ್ತೆಯ ಮೇಲೆ ವಿವಿಧ ವಾಹನಗಳ ಬಿಡಿ ಭಾಗದ ಕಬ್ಬಿಣದ ವಸ್ತುಗಳನ್ನು ಇಟ್ಟಿದ್ದು, ಇದರಿಂದ ಓಡಾಡಲು ಜಾಗವೆ ಇಲ್ಲ.

ಈ ಭಾಗದಲ್ಲಿ ಹೆಚ್ಚಿನ ರೀತಿ ವಾಹನಗಳು ಓಡಾಡುತ್ತದೆ. ಪ್ರತಿನಿತ್ಯ ಶಾಲಾ ವಾಹನ, ಅಂಬ್ಯುಲೆನ್ಸ್ ಸೇರಿದಂತೆ ಹಲವಾರು ವಾಹನಗಳು ಸಂಚರಿಸಬೇಕು. ಇನ್ನು ದೊಡ್ಡ ವಾಹನಗಳು ಬಂದರೇ ರಸ್ತೆ ಮೇಲೆ ಇರುವ ವಸ್ತುಗಳನ್ನು ಪಕ್ಕಕ್ಕೆ ಇಟ್ಟು ಸಂಚರಿಸಬೇಕು. ಮಾಲೀಕರು ವಸ್ತುಗಳನ್ನು ರಸ್ತೆ ಮೇಲೆ ಇಡಲಾಗಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದರು.

ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೇ ರೌಡಿಸಂ ಮಾಡಿ ಜಗಳಕ್ಕೆ ಬರುತ್ತಾರೆ. ಇನ್ನು ಕಸ ಎಲ್ಲಾ ಕೂತು ಚರಂಡಿಯ ಡ್ರೈನೇಜ್ ಗಳು ಕೂಡ ತುಂಬಿ ಹೋಗಿದೆ. ನಗರಸಭೆಗೆ ಈ ಬಗ್ಗೆ ದೂರು ಕೊಟ್ಟ ಪರಿಣಾಮ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿ ಹೀಗೆ ಬಂದು ಆಗೆ ಹೊರಟು ಹೋದರು. ಇವರಿಂದ ಯಾವ ಪ್ರಯೋಜನವಾಗಿರುವುದಿಲ್ಲ.

ಕೂಡಲೇ ನಗರಸಭೆಯವರು ಬಂದು ರಸ್ತೆ ಮೇಲಿರುವ ವಸ್ತುಗಳನ್ನು ತೆರವು ಮಾಡಿಕೊಡಬೇಕು. ಈ ಅಂಗಡಿಯವರಿಗೆ ಇನ್ನು ಲೇಸೆನ್ಸ್ ಕೊಡದಿದ್ದರೂ ಅವರದೆ ಅಧಿಕಾರವಾಗಿ ಬಿಟ್ಟಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಇನ್ನು ರಾಜಕಾರಣಿಗಳು ಚುನಾವಣೆ ವೇಳೆ ಬಂದು ಮತ ಕೇಳಿ ಇಲ್ಲಿ ಸುಂದರ ನಗರವನ್ನಾಗಿ ಮಾಡುವುದಾಗಿ ಹೇಳಿ ಹೋಗುತ್ತಾರೆ. ನಂತರ ಇತ್ತ ಕಡೆ ಗಮನವೇ ಕೊಡುವುದಿಲ್ಲ. ಇನ್ನು ಇಲ್ಲಿ ಯಾವ ಸ್ವಚ್ಛತೆ ಇರುವುದಿಲ್ಲ. ಕಸ ಗುಡಿಸಿ ಅಲ್ಲೆ ಕಸ ಗುಡ್ಡೆ ಹಾಕಿ ಹೋಗುತ್ತಾರೆ. ಇದರಿಂದ ನಾನಾ ರೋಗಗಳು ಮಕ್ಕಳಿಗೆ ಹಿರಿಯರಿಗೆ ಹರಡುತ್ತದೆ ಎಂದು ಹೇಳಿದರು.

ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ತೋಫಿಕ್ ಪಾಷ, ಸಯ್ಯಾದ್ ಕೈಸರ್ ಪಾಷ, ಆದಿಲ್ ಪಾಷ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *